Home » Karnatakal Railway: 6 ಜಿಲ್ಲೆ ಜನರಿಗೆ ಸಿಹಿಸುದ್ದಿ; ಕರ್ನಾಟಕಕ್ಕೆ 2 ಹೊಸ ರೈಲು ಮಾರ್ಗ ಘೋಷಣೆ

Karnatakal Railway: 6 ಜಿಲ್ಲೆ ಜನರಿಗೆ ಸಿಹಿಸುದ್ದಿ; ಕರ್ನಾಟಕಕ್ಕೆ 2 ಹೊಸ ರೈಲು ಮಾರ್ಗ ಘೋಷಣೆ

0 comments
Mangaluru Bengaluru Trains

Karnataka Railway: ದಕ್ಷಿಣ ಪಶ್ಚಿಮ ವಲಯದ ವ್ಯಾಪ್ತಿಗೆ ಬರುವ ಕರ್ನಾಟಕದಲ್ಲಿ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಎರಡು ಹೊಸ ರೈಲ್ವೆ ಮಾರ್ಗ ನಿರ್ಮಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಮಂಡಳಿ, ಆಲಮಟ್ಟಿ ಮತ್ತು ಯಾದಗಿರಿ ನಡುವಿನ 162 ಕಿ.ಮೀ ಮಾರ್ಗದ ಸಮೀಕ್ಷೆ ನಡೆಸಲು ₹4.04 ಕೋಟಿ ಹಣ ಬಿಡುಗಡೆ ಮಾಡಲಾಗುವುದು. ಅದೇ ರೀತಿ ಚನ್ನಗಿರಿ ಮಾರ್ಗವಾಗಿ ಭದ್ರಾವತಿ ಮತ್ತು ಚಿಕ್ಕಜಾಜೂರು ನಡುವಿನ 73 ಕಿ.ಮೀ ಮಾರ್ಗ ಸಮೀಕ್ಷೆ ₹1.825 ಕೋಟಿ ಹಣ ಬಿಡುಗಡೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಿಗೆ ಸೇರಿ ಒಟ್ಟು ರಾಜ್ಯದ ಆರು ಜಿಲ್ಲೆಗಳಿಗೆ ಉಪಯೋಗವಾಗಲಿದೆ. ಆಲಮಟ್ಟಿ-ಯಾದಗಿರಿ, ಅರೆಮಲೆನಾಡಿಗೆ ಸಂಬಂಧಿಸಿದ ಭದ್ರಾವತಿ-ಚಿಕ್ಕಜಾಜೂರ್‌ ನಡುವೆ ಚನ್ನಗಿರಿ ಮೂಲಕ. ಇನ್ನು ಎರಡನೇ ರೈಲು ಮಾರ್ಗದಿಂದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಬಾಗಲಕೋಟೆ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ.

You may also like