Home » ರಾಜ್ಯದ ಮಹಿಳೆಯರಿಗೆ ಗುಡ್‌ನ್ಯೂಸ್‌; ಬ್ಯಾಂಕ್‌ ಖಾತೆಗೆ ಬೀಳಲಿದೆ ಗೃಹಲಕ್ಷ್ಮಿ ಹಣ

ರಾಜ್ಯದ ಮಹಿಳೆಯರಿಗೆ ಗುಡ್‌ನ್ಯೂಸ್‌; ಬ್ಯಾಂಕ್‌ ಖಾತೆಗೆ ಬೀಳಲಿದೆ ಗೃಹಲಕ್ಷ್ಮಿ ಹಣ

0 comments
Lakshmi Hebbalkar

ಬೆಂಗಳೂರು: ರಾಜ್ಯ ಸರಕಾರ ಮನೆಯಜಮಾನಿಯರಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿಯನ್ನು ನೀಡಿದೆ. ಸೋಮವಾರದಿಂದಲೇ ಪ್ರತಿ ಮನೆಗೆ ಒಂದು ಕಂತಿನ ಹಣ ಬಿಡುಗಡೆ ಮಾಡುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

ತಿಂಗಳ ಹೆಸರು ಹೇಳಿಲ್ಲ. ಆರ್ಥಿಕ ಇಲಾಖೆ ಅವರು 24 ನೇ ಕಂತಿನ ಹಣ ನಮಗೆ ಬಿಡುಗಡೆ ಮಾಡಿದ್ದಾರೆ. ಸೋಮವಾರದಿಂದ (ಡಿ.22) ಮುಂದಿನ ಶನಿವಾರದ ಒಳಗೆ 24 ನೇ ಕಂತಿನ ಹಣ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.

You may also like