Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಹೊತ್ತಿರುವ ಡೆವಿಲ್ ಪಡೆ ಜೈಲಿನಿಂದ ರಿಲೀಸ್ ಆಗಿದೆ. ಈ ಮಧ್ಯೆ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ದಾಸ ನಿಗೆ ಮೈಸೂರಿಗೆ ತೆರಳಲು ಅನುಮತಿ ದೊರಕಿದೆ. ಜೊತೆಗೆ ಚಿತ್ರದುರ್ಗದ ಇಬ್ಬರು ಆರೋಪಿಗಳಿಗೂ ತಮ್ಮ ತವರಿಗೆ ತೆರಳಲು ಪರ್ಮಿಷನ್ ದೊರಕಿದೆ.
ಇತ್ತ ಕಡೆ ಡೆವಿಲ್ ಪಡೆಗೆ ಇನ್ನೊಂದು ಖುಷಿಯ ಸುದ್ದಿಯೊಂದಿದೆ. ಅದೇನೆಂದರೆ ನಟ ದರ್ಶನ್ ಗೆ ತಮ್ಮ ತವರಿಗೆ ತೆರಳಲು ಅನುಮತಿ ದೊರಕಿದೆ. ಪ್ರಕರಣ ಆರೋಪ ಹೊತ್ತು ಜೈಲುವಾಸ ಅನುಭವಿಸಿದ ದರ್ಶನ್‌ಗೆ ಮೈಸುರಿಗೆ ತೆರಳಲು ಪರ್ಮಿಷನ್ ದೊರಕಿದೆ.
ಮೈಸೂರಿಗೆ ತೆರಳಲು ಸೆಷನ್ಸ್ ಕೋರ್ಟ್‌ಗೆ ದರ್ಶನ್ ಅರ್ಜಿ ಹಾಕಿದ್ದು, ವಿಚಾರಣೆ ಮಾಡಿದ ಸೆಷನ್ಸ್ ನ್ಯಾಯಾಲಯವು ಈ ಕೆಳಗಿನ ಕಾರಣಗಳನ್ನು ನೀಡಿದೆ. ತಾಯಿಗೆ ಕ್ಯಾನ್ಸರ್ ಕಾಯಿಲೆ ಇದೆ ಅವರನ್ನು ನೋಡಬೇಕು. ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಸಲಹೆ ಪಡೆಯಬೇಕು. ಫಾರ್ಮ್ ಹೌಸ್‌ನ ಪ್ರಾಣಿಗಳನ್ನು ನೋಡಬೇಕು. ಡಿ.20-ಜ.05 ರವರೆಗೆ ಮೈಸೂರಿಗೆ ತೆರಳಲು ಅನುಮತಿಯನ್ನು ನೀಡಲಾಗಿದೆ. ನಾಲ್ಕು ವಾರ ಅನುಮತಿ ಕೋರಿದ್ದ ದರ್ಶನ್‌ಗೆ ಎರಡು ವಾರ ಪರ್ಮಿಷನ್ ನೀಡಲಾಗಿದೆ.
ಇತ್ತ ಕಡೆ ಪೊಲೀಸ್ ಅಧಿಕಾರಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದು, ಅಲ್ಲಿಯವರೆ ಡೆವಿಲ್ ಪಡೆ ಪಾರಾಗಿದ್ದಾರೆ.
