Gmail: ನೀವು ಜಿಮೇಲ್ ಅಕೌಂಟ್ ಹೊಂದಿದ್ದು, ಎರಡು ವರ್ಷಗಳಿಂದ ಅದನ್ನು ಬಳಸಿಲ್ಲ ಅಂದ್ರೆ ಮುಂದಿನ ತಿಂಗಳು ಆ ಅಕೌಂಟ್ ರದ್ಧಾಗುತ್ತದೆ. ಈ ಕುರಿತು ಗೂಗಲ್ ಮಾಹಿತಿ ನೀಡಿದೆ. ಅಷ್ಟೇ ಅಲ್ಲದೆ ಅದನ್ನು ಮರಳಿ ಕೂಡ ಪಡೆಯಬಹುದು. ಹೇಗೆ ಅಂತೀರಾ?
ಹೌದು, ಗೂಗಲ್ ಕಂಪನಿಯು ತನ್ನ ಸುರಕ್ಷತಾ ನಿಯಮಗಳನ್ನು ಕಳೆದ ಮೇ ತಿಂಗಳಿನಲ್ಲಿ ಅಪ್‌ಡೇಟ್ ಮಾಡಿದೆ. ಇದೇ ಸಮಯದಲ್ಲಿ ‘ಮುಂಬರುವ ಡಿಸೆಂಬರ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಒಮ್ಮೆಯೂ ಲಾಗಿನ್ ಮಾಡದ ಅಥವಾ ಬಳಕೆ ಮಾಡದ ವೈಯಕ್ತಿಕ ಗೂಗಲ್ ಖಾತೆಗಳನ್ನು ಡಿಲೀಟ್ ಮಾಡಲಾಗುವುದು. ಇನ್ನುಮುಂದೆ ಕನಿಷ್ಠ ಎರಡು ವರ್ಷಗಳಿಂದ ಬಳಕೆ ಮಾಡದ ಖಾತೆಗಳನ್ನು ನಿರಂತರವಾಗಿ ರದ್ದುಪಡಿಸುತ್ತೇವೆ. ಅದು ಸದ್ಯದಲ್ಲೇ ಜಾರಿಗೆ ಬರಲಿದೆ ಎಂದು ಅದರ ಉಪಾಧ್ಯಕ್ಷರು ಹೇಳಿದ್ದರು.
ಏನೆಲ್ಲಾ ಡಿಲೀಟ್ ಆಗುತ್ತೆ?
ಜಿಮೇಲ್(Gmail), ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್,ಫೋಟೋಸ್ ಇತ್ಯಾದಿ ವೈಯಕ್ತಿಕ ದಾಖಲೆಗಳ ಮಾತ್ರ ಡಿಲೀಟ್ ಆಗಲಿವೆ. ಕಂಪನಿಗಳು ಅಥವಾ ಶಾಲೆ ಇತ್ಯಾದಿ ಸಂಸ್ಥೆಗಳು ಹೊಂದಿರುವ ಗೂಗಲ್ ಖಾತೆಗಳು ಡಿಲೀಟ್ ಆಗುವುದಿಲ್ಲ.
ಅಕೌಂಟ್ ಡಿಲೀಟ್ ಆಗಬಾರದೆಂದರೆ ಏನು ಮಾಡಬೇಕು?
ನಿಮ್ಮ ಗೂಗಲ್ ಅಕೌಂಟ್ ಡಿಸೆಂಬರ್‌ನಲ್ಲಿ ಡಿಲೀಟ್ ಆಗಬಾರದು ಅಂದರೆ ನೀವು ಕಳೆದ ಎರಡು ವರ್ಷಗಳಿಂದ ಖಾತೆ ಬಳಸದಿದ್ದರೆ ಈಗಲೇ ಒಮ್ಮೆ ಲಾಗಿನ್ ಮಾಡಿ’ ಎಂದು ಗೂಗಲ್ ತಿಳಿಸಿದೆ.
ಇದನ್ನೂ ಓದಿ:PSI Recruitment scam: PSI ನೇಮಕಾತಿ ಹಗರಣ- ಮರು ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
