3
Google: ಇತ್ತೀಚಿಗೆ ಗೂಗಲ್ ಕಂಪನಿಯು ತನ್ನ 200 ಸಿಬ್ಬಂದಿಗಳನ್ನು ವಜಾ ಮಾಡಿತ್ತು. ಇದೀಗ ಮತ್ತಷ್ಟು ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ.
ಪ್ರಮುಖ ಸರ್ಜ್ ವಿಭಾಗಕ್ಕೆ ಸೇರಿದಂತೆ ವಿವಿಧ ಡಿವಿಷನ್ಗಳ ಉದ್ಯೋಗಿಗಳಿಗೆ ಸ್ವಯಂ ಆಗಿ ಕೆಲಸ ಬಿಡುವಂತೆ, ಗೂಗಲ್ ಕಂಪನಿಯು ಆಫರ್ ನೀಡಿದೆ.
ಆದರೆ ಕಂಪನಿಯು ತಾನು ಎಷ್ಟು ಜನರನ್ನು ವಜಾಗೊಳಿಸಲಿದೆ ಎಂಬಂತ ಅಂಕಿ ಅಂಶಗಳನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಮಧ್ಯಮ ಸೇರಿದಂತೆ ಸೀನಿಯರ್ ಶ್ರೇಣಿಯ ಉದ್ಯೋಗಿಗಳು ತಾವೇ ಸ್ವಯಂ ಆಗಿ ಉದ್ಯೋಗಕ್ಕೆ ರಾಜೀನಾಮೆ ನೀಡಿದರೆ, 14 ವಾರಗಳ ಮುಂಗಡ ಸಂಬಳ ನೀಡುವಂತಹ ಆಫರ್ ಅನ್ನು ಗೂಗಲ್ ನೀಡಿದ ಎಂದು ಮೂಲಗಳು ತಿಳಿಸುತ್ತವೆ.
