1
Google Maps: ಗೊತ್ತಿಲ್ಲದ ಸ್ಥಳಗಳಿಗೆ ಹೋಗಬೇಕು ಅಂದ್ರೆ ಮೊದಲು ಗೂಗಲ್ ಮೊರೆ ಹೋಗುತ್ತೇವೆ. ಆದ್ರೆ ಇನ್ಮುಂದೆ ಗೂಗಲ್ ಮ್ಯಾಪ್ (Google Maps) ಫಾಲೋ ಮಾಡೋ ಮೊದಲು ಈ ವಿಷ್ಯ ತಿಳ್ಕೊಂಡಿರಿ. ಯಾಕಂದ್ರೆ ಈಗಾಗಲೇ ಗೂಗಲ್ ಮ್ಯಾಪ್ ಫಾಲೋ ಮಾಡುತ್ತಾ ಹೋಗಿ ಕಾರು ಸಮೇತ ಕಾಲುವೆಗೆ ಬಿದ್ದ ಘಟನೆ ಇದೀಗ ಬೆಳಕಿಗೆ ಬಂದಿದೆ.
ಮಾಹಿತಿ ಪ್ರಕಾರ, ವಯನಾಡ್‌ನಿಂದ ಅಲಪ್ಪುಳಕ್ಕೆ ಕುಟುಂಬ ಪ್ರಯಾಣಿಸುತ್ತಿದ್ದಾಗ ವಾಹನವು ಪೂಂಗೋಡ್ ತಿರುವಿನಲ್ಲಿ ಚಲಿಸುವಾಗ ಪಲ್ಟಿಯಾಗಿದೆ. ಸ್ಥಳೀಯರು ಕ್ರೇನ್ ಬಳಸಿ ಕಾರನ್ನು ಕಾಲುವೆಯಿಂದ ಮೇಲಕ್ಕೆತ್ತಿದ್ದಾರೆ. ಸದ್ಯ ಕಾರಿನಲ್ಲಿದ್ದ ಕುಟುಂಬಕ್ಕೆ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.
ಇಂOತಹ ಗೂಗಲ್ ಮ್ಯಾಪ್ ಎಡವಟ್ಟು ಆಗಾಗ ಕೇಳಿಬರುತ್ತಿದ್ದು, ಇನ್ನಾದರೂ ಮ್ಯಾಪ್ ಫಾಲೋ ಮಾಡೋವಾಗ ಎಚ್ಚರವಾಗಿರೋದು ಸೂಕ್ತ.
