Home » Google Translate ಎಡವಟ್ಟು – ‘ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಿಲ್ಲ’ ಎಂದು ಭಾಷಾಂತರ, ಮೆಟಾಗೆ CM ಪತ್ರ

Google Translate ಎಡವಟ್ಟು – ‘ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಿಲ್ಲ’ ಎಂದು ಭಾಷಾಂತರ, ಮೆಟಾಗೆ CM ಪತ್ರ

by V R
0 comments

Google Translate: ಇಂದು ಭಾಷೆಯ ತೊಡಕಿನಿಂದಾಗಿ ಅನೇಕರು ಗೂಗಲ್ ಟ್ರಾನ್ಸ್ಲೇಟ್ ಅನ್ನು ಬಳಸುತ್ತಾರೆ. ಒಮ್ಮೊಮ್ಮೆ ಈ ಟ್ರಾನ್ಸ್ಲೇಟರ್ ಎಡವಟ್ಟು ಕೂಡ ಮಾಡುತ್ತದೆ. ಅಂತೆಯೇ ಇದೀಗ ಗೂಗಲ್ ಟ್ರಾನ್ಸ್ ಲೇಟ್ ‘ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಿಲ್ಲ’ ಎಂದು ತಪ್ಪು ತಪ್ಪು ಭಾಷಾಂತರಿಸಿ ವಿವಾದಕ್ಕೆ ಗುರಿಯಾಗಿದೆ.

ಈ ಕಾರಣಕ್ಕಾಗಿ ಇದೀಗ ಗೂಗಲ್ ಟ್ರಾನ್ಸಲೇಟ್ ಮಾಡಿದಂತ ಎಡವಟ್ಟಿಗೆ ಸಿಎಂ ಸಿದ್ಧರಾಮಯ್ಯ ಗರಂ ಆಗಿದ್ದಾರೆ. ಅಲ್ಲದೇ ಗೂಗಲ್ ತಪ್ಪು ತಪ್ಪು ಭಾಷಾಂತರದ ಬಗ್ಗೆ ಮೆಟಾಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ.

ಅಂದಹಾಗೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಹುಭಾಷಾ ನಟಿ ಬಿ.ಸರೋಜಾದೇವಿ ಅಂತಿಮ ದರ್ಶನಕ್ಕೆ ತೆರೆಳಿ, ಅಂತಿಮ ದರ್ಶನ ಪಡೆದು ಬಂದ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಅನ್ನು ಮೆಟಾ ಭಾಷಾಂತರ ಮಾಡಿದಾಗ ತಪ್ಪು ತಪ್ಪು ಅರ್ಥ ಬರುವಂತೆ ಆಗಿತ್ತು. ಇದರ ಬಗ್ಗೆಯೇ ಮೆಟಾಗೇ ಸಿಎಂ ಸಿದ್ಧರಾಮಯ್ಯ ಪತ್ರ ಬರೆದಿದ್ದಾರೆ.

You may also like