Home » Karnataka: ಕರ್ನಾಟಕದಲ್ಲಿ ಕ್ವಾಂಟಮ್ ಸಿಟಿ ನಿರ್ಮಾಣಕ್ಕೆ 6.17 ಎಕರೆ ನೀಡಿದ ಸರ್ಕಾರ

Karnataka: ಕರ್ನಾಟಕದಲ್ಲಿ ಕ್ವಾಂಟಮ್ ಸಿಟಿ ನಿರ್ಮಾಣಕ್ಕೆ 6.17 ಎಕರೆ ನೀಡಿದ ಸರ್ಕಾರ

0 comments

Karnataka: ಕರ್ನಾಟಕ (Karnataka) ಸರ್ಕಾರವು ಬೆಂಗಳೂರಿನ ಬಳಿಯ ಹೆಸರಘಟ್ಟದಲ್ಲಿ “ಕ್ವಾಂಟಮ್ ಸಿಟಿ (ಕ್ಯೂ-ಸಿಟಿ)” ಗಾಗಿ 6.17 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಇದರಲ್ಲಿ ಅತ್ಯಾಧುನಿಕ ಪ್ರಯೋಗಾಲಯಗಳು, ನವೋದ್ಯಮಗಳಿಗೆ ಇನ್ಕ್ಯುಬೇಷನ್ ಸೌಲಭ್ಯಗಳು ಮತ್ತು ಶೈಕ್ಷಣಿಕ-ಕೈಗಾರಿಕಾ ಸಹಯೋಗಕ್ಕಾಗಿ ಮೂಲಸೌಕರ್ಯಗಳು ಇರಲಿದದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದ್ದಾರೆ.

2035 ರ ವೇಳೆಗೆ ಕರ್ನಾಟಕವು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ದಿಟ್ಟ ಉಪಕ್ರಮಗಳ ಮೂಲಕ 20 ಬಿಲಿಯನ್ ಡಾಲರ್‌ಗಳ ಕ್ವಾಂಟಮ್ ಆರ್ಥಿಕತೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಸಚಿವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:Bengaluru Bulls: ‘ಬೆಂಗಳೂರು ಬುಲ್ಸ್‌’ ನಲ್ಲಿ ಬಿರುಕು? ತಂಡದ ಕ್ಯಾಪ್ಟನ್ ಅಂಕುಶ್ ರಾಠಿ ಟೀಮ್ ನಿಂದ ಔಟ್?

ಕ್ವಾಂಟಮ್ ಸಿಟಿಯನ್ನು “ಐತಿಹಾಸಿಕ ಮೈಲಿಗಲ್ಲು” ಎಂದು ಕರೆದ ಬೋಸರಾಜು, ಇದು ಜಾಗತಿಕ ಪ್ರತಿಭೆಗಳು ಮತ್ತು ಹೂಡಿಕೆಗಳನ್ನು ಆಕರ್ಷಿಸುತ್ತದೆ, ಭಾರತ ಮತ್ತು ವಿಶ್ವದ ಕ್ವಾಂಟಮ್ ನಕ್ಷೆಯಲ್ಲಿ ಬೆಂಗಳೂರು ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ ಎಂದು ಹೇಳಿದರು.

You may also like