8
KSCA: ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯನ್ನು ವಿಧಾನಸೌಧದ ಎದುರು ನಡೆಸುವಂತೆ ಕರೆಕೊಟ್ಟಿದ್ದೇ ಸರಕಾರ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆರೋಪ ಮಾಡಿದೆ. ಇದನ್ನು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದೆ.
ಸರಕಾರ, ಸಚಿವರ ಮೇಲಿನ ಜನರ ಆಕ್ರೋಶದ ಹಾದಿ ತಪ್ಪಿಸಲು ಎಫ್‌ಐಆರ್ ದಾಖಲಿಸಲಾಗಿದೆ ಎಂದು ರಿಟ್ ಅರ್ಜಿಯಲ್ಲಿ ಕೆಎಸ್‌ಸಿಎ ಉಲ್ಲೇಖಿಸಿದೆ. ಘಟನೆಯನ್ನು ಕೆಎಸ್‌ಸಿಎ ಮೇಲೆ ಹೊರಿಸಲು ಯತ್ನಿಸಲಾಗುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜನದಟ್ಟಣೆ ನಿರ್ವಹಣೆ ಆರ್‌ಸಿಬಿ ಹಾಗೂ ಪೊಲೀಸರ ಕರ್ತವ್ಯ. ಕರ್ನಾಟಕದ ಕ್ರಿಕೆಟ್ ನಿಯಂತ್ರಣವಷ್ಟೇ ಕೆಎಸ್‌ಸಿಎ ಜವಾಬ್ದಾರಿ ಎಂದು ಸಂಸ್ಥೆ ಹೇಳಿದೆ.
