Home » ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ | ತುಟ್ಟಿ ಭತ್ಯೆ ಹೆಚ್ಚಿಸಿದ ಹಣಕಾಸು ಇಲಾಖೆ

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ | ತುಟ್ಟಿ ಭತ್ಯೆ ಹೆಚ್ಚಿಸಿದ ಹಣಕಾಸು ಇಲಾಖೆ

0 comments

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯ ವಿಚಾರದಲ್ಲಿ ಶುಭ ಸುದ್ದಿಯೊಂದು ಸಿಕ್ಕಿದ್ದು, ಸರ್ಕಾರಿ ನೌಕರರು ಹಾಗೂ ಕೇಂದ್ರ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಿದೆ.

ಪೂರ್ವ ಪರಿಷ್ಕೃತ ವೇತನ ಶ್ರೇಣಿ ಅಥವಾ 5ನೇ CPC ಯ ದರ್ಜೆಯ ವೇತನದಲ್ಲಿ ತಮ್ಮ ವೇತನವನ್ನು ಪಡೆಯುವ ಕೇಂದ್ರ ಸರ್ಕಾರಿ ನೌಕರರಿಗೆ, ಕೇಂದ್ರವು DA ಯನ್ನು ಈಗಿರುವ 368% ರಿಂದ 381% ಕ್ಕೆ ಏರಿಸಿದೆ. ಪೂರ್ವ ಪರಿಷ್ಕೃತ 6ನೇ CPC ವೇತನ ಶ್ರೇಣಿ ಅಥವಾ ದರ್ಜೆಯ ವೇತನದಲ್ಲಿ ತಮ್ಮ ವೇತನವನ್ನು ಪಡೆಯುವ ಕೇಂದ್ರ ಸರ್ಕಾರಿ ನೌಕರರಿಗೆ, ಕೇಂದ್ರವು ಅವರ ಡಿಎಯನ್ನು 196% ರಿಂದ 203% ಕ್ಕೆ ಏರಿಸಿದೆ. ಈ ಪರಿಷ್ಕೃತ ತುಟ್ಟಿ ಭತ್ಯೆಯು 2022ರ ಜನವರಿ 1ರಿಂದ ಪೂರ್ವಾನ್ವಯವಾಗಲಿದೆ ಎಂದು ಹಣಕಾಸು ಸಚಿವಾಲಯವು ಹೇಳಿದೆ.

6 ನೇ CPC ಯ ಪೂರ್ವ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನವನ್ನು ಪಡೆಯುವ ಕೇಂದ್ರ ಸರ್ಕಾರಿ ನೌಕರರು ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ DA ಹೆಚ್ಚಳದ ಕುರಿತು ಪ್ರಕಟಿಸಲಾದ ಮೆಮೊರಂಡಂನಲ್ಲಿ ತುಟ್ಟಿ ಭತ್ಯೆ ಏರಿಕೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ .

You may also like

Leave a Comment