Home » ಸರ್ಕಾರಿ ಆಸ್ಪತ್ರೆಯಲ್ಲೊಂದು ಯಡವಟ್ಟು ; ಗರ್ಭಿಣಿ ಹೊಟ್ಟೆಯೊಳಗಿನಿಂದ ಮಗು ತೆಗೆದು, ಮತ್ತೆ ಒಳಗಿಟ್ಟು ಹೊಲಿಗೆ ಹಾಕಿದ್ರು

ಸರ್ಕಾರಿ ಆಸ್ಪತ್ರೆಯಲ್ಲೊಂದು ಯಡವಟ್ಟು ; ಗರ್ಭಿಣಿ ಹೊಟ್ಟೆಯೊಳಗಿನಿಂದ ಮಗು ತೆಗೆದು, ಮತ್ತೆ ಒಳಗಿಟ್ಟು ಹೊಲಿಗೆ ಹಾಕಿದ್ರು

by Mallika
0 comments

‘ವೈದ್ಯೋ ನಾರಾಯಣ ಹರಿ’ ಎಂಬ ಮಾತೊಂದಿದೆ. ಅಂದರೆ ನಾವು ದೇವರಲ್ಲಿ ವೈದ್ಯರನ್ನು ಕಾಣುತ್ತೇವೆ ಎಂದು. ದೇವರ ಎರಡನೇ ರೂಪವೇ ವೈದ್ಯರು. ಇಂತಿಪ್ಪಾ ವೈದ್ಯರೇ ರೋಗಿಯ ಬಾಳಲ್ಲಿ ಆಟವಾಡಿದರೆ ಏನಾಗಬೇಡ? ಹೌದು, 7 ತಿಂಗಳ ಗರ್ಭಿಣಿಯ ವಿಷಯದಲ್ಲಿ ಇಂತಿಪ್ಪ ಒಂದು ತೀರಾ ಊಹಿಸಲಾರದ ಘಟನೆ ನಡೆದಿದೆ.

ಅಂತಹ ಅವಘಡವೊಂದು ಅಸ್ಸಾಂನಲ್ಲಿ ಸಂಭವಿಸಿದೆ. 12 ದಿನಗಳ ಹಿಂದೆ, ಹೊಟ್ಟೆನೋವಿನಿಂದ ಬಳಲುತ್ತಿದ್ದ ಏಳು ತಿಂಗಳ ಗರ್ಭಿಣಿ ಅಸ್ಸಾಂನ ಬರಾಕ್ ಕಣಿವೆಯಲ್ಲಿರುವ ಕರೀಂಗಂಜ್ ಸಿವಿಲ್‌ ಆಸ್ಪತ್ರೆಗೆ ಬಂದಿದ್ದರು. ಬಂದವರನ್ನು ಅದೇ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ಆಶಿಶ್ ಕುಮಾರ್ ಬಿಸ್ವಾಸ್ ಅವರು ಯಾವುದೇ ಪರೀಕ್ಷೆ ನಡೆಸದೆ, ಡೈರೆಕ್ಟಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಭ್ರೂಣವು ಬೆಳವಣಿಗೆಯಾಗಿಲ್ಲ ಹಾಗೂ ಗಾತ್ರದಲ್ಲಿ ತುಂಬಾ ಚಿಕ್ಕದಾಗಿದೆ ಎಂಬುದನ್ನು ಗಮನಿಸಿ, ತಕ್ಷಣ ಮತ್ತೆ ಭ್ರೂಣವನ್ನು ಗರ್ಭದೊಳಗೆ ಇರಿಸಿ ಹೊಲಿಗೆ ಹಾಕಿದ್ದಾರೆ.

ಆದರೆ ಬುಧವಾರದಂದು ಮಹಿಳೆಯ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ಕೂಡಲೇ ಅವರ ಮನೆಮಂದಿ ಅದೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆವಾಗ ಈ ಡಾಕ್ಟರ್ ಮಾಡಿರುವ ಕಥೆ ಬೆಳಕಿಗೆ ಬಂದಿದೆ. ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ಥಳೀಯರು ಕುಟುಂಬ ಸದಸ್ಯರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.

You may also like

Leave a Comment