Home » Health: ರಾಜ್ಯದ ಆಸ್ಪತ್ರೆಗಳಲ್ಲಿ ‘CT Scan, MRI Scan’ ಗಳಿಗೆ ಶುಲ್ಕ ನಿಗದಿಪಡಿಸಿ ಸರ್ಕಾರ ಆದೇಶ!

Health: ರಾಜ್ಯದ ಆಸ್ಪತ್ರೆಗಳಲ್ಲಿ ‘CT Scan, MRI Scan’ ಗಳಿಗೆ ಶುಲ್ಕ ನಿಗದಿಪಡಿಸಿ ಸರ್ಕಾರ ಆದೇಶ!

by ಕಾವ್ಯ ವಾಣಿ
0 comments

Health: ಇನ್ಮುಂದೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ‘CT Scan, MRI Scan’ ಗಳಿಗೆ ಶುಲ್ಕ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಉಚಿತ ರೋಗ ಪತ್ತೆ ಮತ್ತು ಸೇವೆಗಳನ್ನು (Health) ಅನುಷ್ಠಾನಗೊಳಿಸಲು CT & MRI Scan ಸೇವೆಗಳನ್ನು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ (PPP) ಮಾದರಿಯಲ್ಲಿ ಪಡೆಯಲು ಅನುಮೋದನೆ ನೀಡಲಾಗಿದ್ದು, ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಆದೇಶದಲ್ಲಿ 14 ಜಿಲ್ಲಾ ಆಸ್ಪತ್ರೆಗಳಲ್ಲಿ CT Scan ಅನ್ನು PPP ಮಾದರಿಯಲ್ಲಿ ಪ್ರತಿ Scan ಗೆ ರೂ. 1,550/- ದರದಲ್ಲಿ ಹಾಗೂ 5 ಜಿಲ್ಲಾ ಆಸ್ಪತ್ರೆಗಳಲ್ಲಿ MRI Scan ಅನ್ನು ಪ್ರತಿ Scan ಗೆ ರೂ. 3,000/- ದರದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.

ಆದೇಶಗಳಲ್ಲಿ ಹೊಸದಾಗಿ ರಾಜ್ಯದ 15 ಸಾರ್ವಜನಿಕ ಆಸ್ಪತ್ರೆಗಳಲ್ಲಿ MRI Scan ಸೇವೆಗಳನ್ನು ಹಾಗೂ 5 ಜಿಲ್ಲಾ ಆಸ್ಪತ್ರೆಗಳಲ್ಲಿ CT Scan ಸೇವೆಗಳನ್ನು ಸರ್ಕಾರದ ಸಹಭಾಗಿತ್ವದಲ್ಲಿ PPP ಮಾದರಿಯಲ್ಲಿ ರೂ. 47.41 ಕೋಟಿ ವೆಚ್ಚದಲ್ಲಿ 7 ವರ್ಷದ ಅವಧಿಗೆ ಟೆಂಡರ್ ಆಹ್ವಾನಿಸಿ ಕ್ರಮ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮುಂದುವರೆದು ದಿ: 23.02.2024 ರ ತಿದ್ದುಪಡಿ ಆದೇಶದಲ್ಲಿ 7 ವರ್ಷದ ಅವಧಿಗೆ ರೂ. 222.28 ಕೋಟಿಗಳ ವೆಚ್ಚದಲ್ಲಿ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. Scan ಮತ್ತು MRI Scan ಸೇವೆಗಳಿಗೆ PHH ಕಾರ್ಡ್ ಹೊಂದಿರುವ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಹಾಗೂ ಇತರರಿಗೆ ಶೇಕಡ 70 ರಷ್ಟು ಶುಲ್ಕ ವಿಧಿಸಲು ಆದೇಶಿಸಲಾಗಿದೆ.

You may also like