Govt Employees: ಬಸ್ ನಿಲ್ಲಿಸಿ ಮುಷ್ಕರ ಮಾಡ್ತಾರಾ ಸಾರಿಗೆ ನೌಕರರು.? ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಅನೆಕ ಬಾರಿ ಕೇಳಿಕೊಂಡರು ಸರ್ಕಾರ ಸಾರಿಗೆ ನೌಕರರ ಬೇಡಿಕೆ ಕಡೆ ಗಮನ ನೀಡುತ್ತಿಲ್ಲ. ಇದೀಗ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡದ ಸರ್ಕಾರ ಮೇಲೆ ನೌಕರರು ಸಿಟ್ಟುಗೊಂಡಿದ್ದಾರೆ. ಹಾಗಾಗಿ ಸಾರಿಗೆ ನೌಕರರ ಮುಷ್ಕರ ದಿನಾಂಕ ಇಂದೇ ನಿರ್ಧಾರವಾಗಲಿದೆ.
ಆರು ತಿಂಗಳಿಂದ ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಹೀಗಾಗಿ ಮತ್ತೆ ಹೋರಾಟಕ್ಕೆ 1ಲಕ್ಷ 10 ಸಾವಿರ ಸಾರಿಗೆ ನೌಕರರು ಸಜ್ಜುಗೊಂಡಿದ್ದಾರೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಸಂಚಾರ ನಿಲ್ಲಿಸಿ ಮುಷ್ಕರ ಮಾಡಲು ನೌಕರರು ನಿರ್ಧಾರಿಸಿರುವ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ.
ಕಳೆದ ವರ್ಷ ಡಿ,31 ರಂದು ಮುಷ್ಕರಕ್ಕೆ ನೌಕರರು ಕರೆ ನೀಡಿದ್ದರು. ಅಂದು ಸಂಧಾನ ಸಭೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು ರಾಜ್ಯ ಸರ್ಕಾರ. ಆದ್ರೆ ಇಲ್ಲಿಯವರಿಗೆ ನೌಕರರ ಬೇಡಿಕೆ ಈಡೇರಿಸುವ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮುಂದಿನ ಹೋರಾಟದ ಬಗ್ಗೆ ಇಂದು ನೌಕರರ ಸಭೆ ನಡೆಸಲಾಗುತ್ತಿದೆ. ಸಾರಿಗೆ ನೌಕರರ ಮುಖಂಡ ಅನಂತಸುಬ್ಬರಾಬ್ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಹಲವು ಸಾರಿಗೆ ನೌಕರರ ಮುಖಂಡರುಗಳು ಬಾಗಿಯಾಗಲಿದ್ದಾರೆ.
ಇಂದಿನ ಸಭೆಯಲ್ಲಿ ಮುಷ್ಕರ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದ್ದು, ಶೇ 25ರಷ್ಟು ವೇತನ ಹೆಚ್ಚಳ ಮಾಡಲು ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ. ಆದ್ರೆ ನೌಕರರ ಜತೆ ಮಾತುಕತೆ ನಡೆಸಿ ವೇತನ ಪರಿಷ್ಕರಣೆಗೆ ಸರ್ಕಾರ ಹಿಂದೇಟು ಹಾಕ್ತಿದೆ. ಹೀಗಾಗಿ ವೇತನ ಹೆಚ್ಚಳ ಮಾಡದ ಸರ್ಕಾರ ವಿರುದ್ದ ಬೀದಿಗಿಳಿಯಲು ನೌಕರರು ಪ್ಲಾನ್ ಮಾಡಿದ್ದಾರೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದು, ತಮ್ಮ ಬೇಡಿಕೆ ಈಡೇರಿಸಲು ಹೋರಾಟ ನಡೆಸಲಿದ್ದಾರೆ.
