Home » ಅಜ್ಜಿ-ಪುಲ್ಲಿ ಜಗಳ|ಇಬ್ಬರೂ ಸಾವನ್ನಪ್ಪುವ ಮೂಲಕ ಅಂತ್ಯ

ಅಜ್ಜಿ-ಪುಲ್ಲಿ ಜಗಳ|ಇಬ್ಬರೂ ಸಾವನ್ನಪ್ಪುವ ಮೂಲಕ ಅಂತ್ಯ

0 comments

ಬೆಂಗಳೂರು:ಸಾಮಾನ್ಯವಾಗಿ ಅಜ್ಜಿಯಂದಿರಿಗೆ ಮೊಮ್ಮಕ್ಕಳು ಅಂದ್ರೆ ಪ್ರೀತಿ ಹೆಚ್ಚು. ಆದ್ರೆ ಇಲ್ಲೊಂದು ಕಡೆ ಇಬ್ಬರ ನಡುವೆ ಯುದ್ಧ ಶುರುವಾಗಿ ಕೊಲೆಯಲ್ಲಿ ಅಂತ್ಯ ಕಂಡಿದೆ.

ಅಜ್ಜಿ ಮೊಮ್ಮಗಳು ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು,ಇತ್ತೀಚೆಗೆ ಮೊಮ್ಮಗಳ ಎರಡು ತಿಂಗಳ ಮಗು ಮೃತಪಟ್ಟಿತ್ತು. ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಅಜ್ಜಿ ಮತ್ತು ಮೊಮ್ಮಗಳ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ 25 ವರ್ಷದ ಮೊಮ್ಮಗಳು 75 ವರ್ಷದ ಅಜ್ಜಿ ಮೇಲೆ ಕೋಪದಲ್ಲಿ ಹಲ್ಲೆ ಮಾಡಿದ್ದಾಳೆ.

ಈ ವೇಳೆ ಅಜ್ಜಿಯ ತಲೆ ಗೋಡೆಗೆ ತಗುಲಿ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ನಂತರ ಹಲ್ಲೆ ಮಾಡಿದ ಮೊಮ್ಮಗಳು ನೇಣಿಗೆ ಶರಣಾಗಿದ್ದಾಳೆ. ಮೊಮ್ಮಗಳ ಪತಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು,ಈ ಪ್ರಕರಣ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

You may also like

Leave a Comment