Home » ಮನೆಗೆ ಮೊಮ್ಮಗಳ ಆಗಮನಕ್ಕೆ ಹೆಲಿಕಾಪ್ಟರ್ ಬುಕ್ ಮಾಡಿದ ರೈತ !!

ಮನೆಗೆ ಮೊಮ್ಮಗಳ ಆಗಮನಕ್ಕೆ ಹೆಲಿಕಾಪ್ಟರ್ ಬುಕ್ ಮಾಡಿದ ರೈತ !!

0 comments

ಮನೆಗೆ ಹೊಸ ಅತಿಥಿಯ ಆಗಮನವಾದರೆ ಮನೆಮಂದಿಯೆಲ್ಲ ಸಂಭ್ರಮಿಸುವುದು ಸಹಜ. ಮಗು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ಮನೆಯವರ ಖುಷಿಗಂತೂ ಕೊನೆಯೇ ಇರುವುದಿಲ್ಲ. ಅದೇ ರೀತಿ ಇಲ್ಲೊಬ್ಬ ರೈತ ಮೊಮ್ಮಗಳು ಜನಿಸಿದ ಖುಷಿಯಲ್ಲಿ ಪ್ರೀತಿಯ ಪುಟ್ಟ ಕಂದಮ್ಮನನ್ನು ಮನೆಗೆ ಬರಮಾಡಿಕೊಳ್ಳಲು ಹೆಲಿಕಾಪ್ಟರನ್ನೇ ಬುಕ್ ಮಾಡಿದ್ದಾನೆ.

ಹೌದು. ಪುಣೆಯ ಹೊರವಲಯದಲ್ಲಿರುವ ಬಾಲೆವಾಡಿ ಪ್ರದೇಶದ ನಿವಾಸಿ ಅಜಿತ್ ಪಾಂಡುರಂಗ ಬಲ್ವಾಡ್ಕರ್ ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿ, ಕುಟುಂಬಕ್ಕೆ ಹೊಸ ಸದಸ್ಯೆ ಕ್ರುಶಿಕಾಗೆ ಸ್ವಾಗತ ಕೋರಲು ಹೆಲಿಕಾಪ್ಟರ್ ಬಾಡಿಗೆಗೆ ಪಡೆದಿರುವುದಾಗಿ ತಿಳಿಸಿದ್ದಾರೆ.

ಶೆವಾಲ್ ವಾಡಿಯಲ್ಲಿರುವ ತವರು ಮನೆಯಿಂದ ತಾಯಿ ಹಾಗೂ ಮಗುವನ್ನು ಮನೆಗೆ ಕರೆದುಕೊಂಡು ಬರುವ ಸಮಯ ಬಂದಾಗ ಹೆಲಿಕಾಪ್ಟರ್ ಬುಕ್ ಮಾಡಿರುವುದಾಗಿ ಹೇಳಿದ್ದಾರೆ. ಇನ್ನು ಈ ಹೆಲಿಕಾಪ್ಟರ್ ಮುಂದೆ ಮನೆಮಂದಿಯಲ್ಲಾ ನಿಂತು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.

ಇತ್ತೀಚಿಗೆ ದಂಪತಿಗಳು ಹೆಣ್ಣು ಮಗುವಿನ ಆಗಮನಕ್ಕೆ ಹೆಲಿಕಾಪ್ಟರ್ ಬುಕ್ ಮಾಡಿದ್ದು ಬಹಳ ವೈರಲ್ ಆಗಿತ್ತು. ಅಂತೆಯೇ ಇದೀಗ ರೈತ ಅದೇ ಸಂಪ್ರದಾಯವನ್ನು ಮುಂದುವರಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ.

You may also like

Leave a Comment