Home » Mumbai: ತನ್ನನ್ನು ಸಾಕಿ ಬೆಳೆಸಿದ್ದ ಅಜ್ಜಿಗೆ ಕ್ಯಾನ್ಸರ್‌ ಬಂದಿದೆ ಎಂದು ಕಸದ ರಾಶಿಗೆ ಎಸೆದ ಮೊಮ್ಮಗ

Mumbai: ತನ್ನನ್ನು ಸಾಕಿ ಬೆಳೆಸಿದ್ದ ಅಜ್ಜಿಗೆ ಕ್ಯಾನ್ಸರ್‌ ಬಂದಿದೆ ಎಂದು ಕಸದ ರಾಶಿಗೆ ಎಸೆದ ಮೊಮ್ಮಗ

by Mallika
0 comments

Mumbai: ತನ್ನನ್ನು ಸಾಕಿ ಬೆಳೆಸಿದ್ದ ಅಜ್ಜಿಗೆ ಕ್ಯಾನ್ಸರ್‌ ಬಂದಿದೆ ಎಂದು ಮರುಗುವ ಬದಲು ಮೊಮ್ಮಗನೊಬ್ಬ ಕಸದ ತೊಟ್ಟಿಯಲ್ಲಿ ಎಸೆದು ಹೋಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. 60 ವರ್ಷದ ಯಶೋಧಾ ಗಾಯಕ್ವಾಡ್‌ ಅವರನ್ನು ಸ್ವಂತ ಮೊಮ್ಮಗನೇ ಕಸದ ರಾಶಿಯಲ್ಲಿ ಎಸೆದಿರುವ ಘಟನೆ ನಡೆದಿದೆ.

ಯಶೋಧಾ ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಶನಿವಾರ ಬೆಳಗ್ಗೆ ಆರ್‌ ಕಾಲೋನಿಯ ರಸ್ತೆಬದಿಯ ಕಸದ ರಾಶಿಯ ಮೇಲೆ ಮಹಿಳೆ ದುರ್ಬಲ ಸ್ಥಿತಿಯಲ್ಲಿ ಮಲಗಿರುವುದನ್ನು ಅಲ್ಲೇ ಹೋಗುತ್ತಿದ್ದವರು ನೋಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಮಹಿಳೆಯ ಶವ ಬೆಳಗ್ಗೆ 5.30 ಕ್ಕೆ ಪತ್ತೆಯಾಗಿದ್ದು, ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತನ್ನ ಕುಟುಂಬ ಸದಸ್ಯರ ಎರಡು ನಿವಾಸಗಳ ವಿಳಾಸವನ್ನು ಹಂಚಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Cyber crime: “Mayfield Trading” ಎಂಬ ಶೇರು ಮಾರುಕಟ್ಟೆಯಿಂದ ವ್ಯಕ್ತಿಯೋರ್ವರಿಗೆ 46 ಲಕ್ಷ ವಂಚನೆ!

You may also like