2026 Holiday : ಉದ್ಯೋಗಿಗಳಿಗೆ ರಜೆಯ ವಿಚಾರವಾಗಿ ಭರ್ಜರಿ ಗುಡ್ ನ್ಯೂಸ್ ಒಂದು ಸಿಕ್ಕಿದ್ದು 2026 ರಲ್ಲಿ ಬರೋಬ್ಬರಿ ನೂರು ದಿನ ರಜೆ ಲಭ್ಯವಾಗಲಿದೆ. ಇದೀಗ ರಜೆ ಪಟ್ಟಿ ವೈರಲ್ ಆಗಿದೆ.
ಹೌದು, ಸಾಮಾನ್ಯವಾಗಿ ಹೊಸ ವರ್ಷ ಅಥವಾ ಹೊಸ ತಿಂಗಳು ಆರಂಭವಾಗುವ ಸಂದರ್ಭದಲ್ಲಿ ಎಷ್ಟು ರಜೆ ಸಿಗುತ್ತದೆ ಎಂದು ಲೆಕ್ಕ ಹಾಕುವುದುಂಟು. ಅಂತೆಯೇ ಇದೀಗ 2025 ಮುಗಿದು ಇನ್ನು ಕೆಲವೇ ದಿನಗಳಲ್ಲಿ 2026ನ್ನು ನಾವು ಸ್ವಾಗತಿಸಲಿದ್ದೇವೆ. ಈ ಹಿನ್ನೆಲೆಯಲ್ಲಿ 2026ರಲ್ಲಿ ಎಷ್ಟು ದಿನ ರಜೆ ಇದೆ ಎಂಬ ಪಟ್ಟಿ ಒಂದು ಸಿದ್ಧವಾಗಿದೆ. ಹಾಗಿದ್ರೆ ಯಾವೆಲ್ಲ ದಿನ ರಜೆ ಇದೆ ಎಂದು ನೋಡೋಣ ಬನ್ನಿ.
2026 ರಲ್ಲಿ ಒಟ್ಟು ರಜಾದಿನಗಳು:
ಭಾನುವಾರಗಳು – 52
ಒಟ್ಟು ವಾರಾಂತ್ಯದ ರಜಾದಿನಗಳು- 64 ದಿನಗಳು
ತಿಂಗಳ ಆಧಾರದ ಮೇಲೆ ಕೇಂದ್ರ ಸರ್ಕಾರಿ ರಜಾದಿನಗಳ ಪಟ್ಟಿ:
ಜನವರಿ
ಜನವರಿ 1- ಹೊಸ ವರ್ಷದ ದಿನ
ಜನವರಿ 3 – ಹಜರತ್ ಅಲಿಯವರ ಜನ್ಮದಿನ
ಜನವರಿ 14 – ಮಕರ ಸಂಕ್ರಾಂತಿ / ಪೊಂಗಲ್ / ಮಾಘ ಬಿಹು
ಜನವರಿ 23 – ವಸಂತ ಪಂಚಮಿ (ಶ್ರೀ ಪಂಚಮಿ)
ಜನವರಿ 26 – ಗಣರಾಜ್ಯೋತ್ಸವ
ಫೆಬ್ರವರಿ
ಫೆಬ್ರವರಿ 1 – ಗುರು ರವಿದಾಸ್ ಜಯಂತಿ
ಫೆಬ್ರವರಿ 12 – ಸ್ವಾಮಿ ದಯಾನಂದ ಸರಸ್ವತಿಯವರ ಜನ್ಮದಿನ
ಫೆಬ್ರವರಿ 15 – ಮಹಾಶಿವರಾತ್ರಿ
ಫೆಬ್ರವರಿ 19 – ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚರಣೆ.
ಮಾರ್ಚ್
ಮಾರ್ಚ್ 3 – ಹೋಲಿಕಾ ದಹನ್ / ಡೋಲ್ ಯಾತ್ರೆ
ಮಾರ್ಚ್ 4 – ಹೋಳಿ
ಮಾರ್ಚ್ 19 – ಯುಗಾದಿ / ಗುಡಿ ಪಾಡ್ವಾ / ತೆಲುಗು ಹೊಸ ವರ್ಷ
ಮಾರ್ಚ್ 20 – ಜುಮ್ಮಾ-ಉಲ್-ವಿದಾ
ಮಾರ್ಚ್ 21 – ಈದ್-ಉಲ್-ಫಿತರ್ (ರಂಜಾನ್)
ಮಾರ್ಚ್ 26 – ಶ್ರೀ ರಾಮನವಮಿ
ಮಾರ್ಚ್ 31 – ಮಹಾವೀರ ಜಯಂತಿ
ಏಪ್ರಿಲ್
ಏಪ್ರಿಲ್ 3 – ಶುಭ ಶುಕ್ರವಾರ
ಏಪ್ರಿಲ್ 5 – ಈಸ್ಟರ್ ಭಾನುವಾರ
ಏಪ್ರಿಲ್ 14 – ವೈಶಾಖಿ / ವಿಷು / ತಮಿಳು ಹೊಸ ವರ್ಷ
ಏಪ್ರಿಲ್ 15 – ಬೊಹಾಗ್ ಬಿಹು / ಬಂಗಾಳಿ ಹೊಸ ವರ್ಷ
ಮೇ
ಮೇ 1 – ಬುದ್ಧ ಪೂರ್ಣಿಮೆ
ಮೇ 9 – ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನ.
ಮೇ 27 – ಬಕ್ರೀದ್ (ಈದ್-ಉಲ್-ಅಧಾ)
ಜೂನ್
ಜೂನ್ 26 – ಮೊಹರಂ
ಜುಲೈ
ಜುಲೈ 16 – ರಥಯಾತ್ರೆ
ಆಗಸ್ಟ್
ಆಗಸ್ಟ್ 15 – ಸ್ವಾತಂತ್ರ್ಯ ದಿನ
ಆಗಸ್ಟ್ 15 – ಪಾರ್ಸಿ ಹೊಸ ವರ್ಷ (ನವ್ರೋಜ್)
ಆಗಸ್ಟ್ 26 – ಮಿಲಾದ್-ಉನ್-ನಬಿ
ಆಗಸ್ಟ್ 26 – ಓಣಂ (ತಿರುವೋಣಂ)
ಆಗಸ್ಟ್ 28 – ರಕ್ಷಾ ಬಂಧನ
ಸೆಪ್ಟೆಂಬರ್
ಸೆಪ್ಟೆಂಬರ್ 4 – ಜನ್ಮಾಷ್ಟಮಿ (ವೈಷ್ಣವ)
ಸೆಪ್ಟೆಂಬರ್ 14 – ವಿನಾಯಕ ಚವಿತಿ
ಅಕ್ಟೋಬರ್
ಅಕ್ಟೋಬರ್ 2 – ಗಾಂಧಿ ಜಯಂತಿ
ಅಕ್ಟೋಬರ್ 18, 19, 20 – ದುರ್ಗಾ ಪೂಜೆ (ಸಪ್ತಮಿ, ಅಷ್ಟಮಿ, ನವಮಿ) ಮತ್ತು ವಿಜಯದಶಮಿ
ಅಕ್ಟೋಬರ್ 26 – ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 29 – ಕರ್ವಾ ಚೌತ್
ನವೆಂಬರ್
ನವೆಂಬರ್ 8 – ದೀಪಾವಳಿ (ಲಕ್ಷ್ಮಿ ಪೂಜೆ)
ನವೆಂಬರ್ 9 – ಗೋವರ್ಧನ ಪೂಜೆ
ನವೆಂಬರ್ 11 – ಭಾಯಿ ದೂಜ್
ನವೆಂಬರ್ 15 – ಛಠ್ ಪೂಜೆ
ನವೆಂಬರ್ 24 – ಗುರುನಾನಕ್ ಜಯಂತಿ
ನವೆಂಬರ್ 24 – ಗುರು ತೇಜ್ ಬಹದ್ದೂರ್ ಹುತಾತ್ಮ ದಿನ
ಡಿಸೆಂಬರ್
ಡಿಸೆಂಬರ್ 23 – ಹಜರತ್ ಅಲಿಯವರ ಜನ್ಮದಿನ (ಪರ್ಯಾಯ ದಿನಾಂಕ)
ಡಿಸೆಂಬರ್ 24 – ಕ್ರಿಸ್‌ಮಸ್ ಈವ್
ಡಿಸೆಂಬರ್ 25 – ಕ್ರಿಸ್‌ಮಸ್ ದಿನ
