Home » Jio ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ – ಇನ್ನು 18 ತಿಂಗಳು ಈ ಯೋಜನೆ ಫ್ರೀ..!!

Jio ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ – ಇನ್ನು 18 ತಿಂಗಳು ಈ ಯೋಜನೆ ಫ್ರೀ..!!

0 comments

Jio: ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿರುವ ಜಿಯೋ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು 18 ತಿಂಗಳು ಇದನ್ನು ಫ್ರೀ ಕೊಡಲು ನಿರ್ಧರಿಸಿದೆ.

ಹೌದು, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಗೂಗಲ್ ಗುರುವಾರ (ಅಕ್ಟೋಬರ್ 30) ಮಹತ್ವದ ಪಾಲುದಾರಿಕೆಯನ್ನು ಘೋಷಣೆ ಮಾಡಿದೆ. ಕಂಪೆನಿಯು ಜಿಯೋ ಚಂದಾದಾರರಿಗೆ 18 ತಿಂಗಳವರೆಗೆ 35,100 ರೂಪಾಯಿ ಮೌಲ್ಯದ ಗೂಗಲ್‌ನ ಜೆಮಿನಿ ಪ್ರೊ ಯೋಜನೆಗೆ ಉಚಿತ ಪ್ರವೇಶವನ್ನು ನೀಡಲು ಗೂಗಲ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಈ ಆಫರ್ ಪ್ರತಿ ಬಳಕೆದಾರರಿಗೆ ಸುಮಾರು 35,100 ರೂಪಾಯಿ ಮೌಲ್ಯದ್ದಾಗಿದೆ. ಗೂಗಲ್ ಜೆಮಿನಿ 2.5 ಪ್ರೊ, ಇತ್ತೀಚಿನ ನ್ಯಾನೋ ಬನಾನಾ ಮತ್ತು ವಿಯೋ 3.1 ಮಾದರಿಗಳೊಂದಿಗೆ ಅದ್ಭುತ ಚಿತ್ರಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಲು ಬಳಕೆದಾರರಿಗೆ ವಿಸ್ತೃತ ಅವಕಾಶಗಳು ಸೃಷ್ಟಿಯಾಗುತ್ತಲಿವೆ. ಅಧ್ಯಯನ ಹಾಗೂ ಸಂಶೋಧನೆಗಾಗಿ ನೋಟ್‌ಬುಕ್ ಎಲ್‌ಎಂಗೆ ಹೆಚ್ಚಿನ ಪ್ರವೇಶ ಮತ್ತು 2 ಟಿಬಿ ಕ್ಲೌಡ್ ಸ್ಟೋರೇಜ್‌ನಂತಹ ಪ್ರೀಮಿಯಂ ಸೇವೆಗಳನ್ನು ಸಹ ಈ ಹೊಸ ಆಫರ್ ಒಳಗೊಂಡಿದೆ.

ಅಂದಹಾಗೆ ಆರಂಭದಲ್ಲಿ ಈ ವೈಶಿಷ್ಟ್ಯವು 18 ರಿಂದ 25 ವರ್ಷ ವಯಸ್ಸಿನ ಜಿಯೋ ಬಳಕೆದಾರರಿಗೆ ಲಭ್ಯ ಇರುತ್ತದೆ. ನಂತರ, ಜಿಯೋದ ಎಲ್ಲಾ ಬಳಕೆದಾರರು ಇದರ ಪ್ರಯೋಜನ ದೊರೆಯಲಿದೆ. ಕಂಪನಿಯು ಈ ಎಐ ವೈಶಿಷ್ಟ್ಯವನ್ನು 5ಜಿ ಅನ್‌ಲಿಮಿಟೆಡ್ ಯೋಜನೆಗಳನ್ನು ಹೊಂದಿರುವ ಜಿಯೋ ಗ್ರಾಹಕರಿಗೆ ಮಾತ್ರ ಒದಗಿಸುತ್ತದೆ.

You may also like