Home » Lucknow: ಶೂ ಅಡಗಿಸಿಟ್ಟಿದ್ದಕ್ಕೆ 50ಸಾವಿರ ನೀಡುವ ಬದಲು 5 ಸಾವಿರ ನೀಡಿದ ವರ; ವಧುವಿನ ಕಡೆಯಿಂದ ಥಳಿತ!

Lucknow: ಶೂ ಅಡಗಿಸಿಟ್ಟಿದ್ದಕ್ಕೆ 50ಸಾವಿರ ನೀಡುವ ಬದಲು 5 ಸಾವಿರ ನೀಡಿದ ವರ; ವಧುವಿನ ಕಡೆಯಿಂದ ಥಳಿತ!

0 comments

Lucknow: ಮದುವೆ ಸಮಾರಂಭವೊಂದರಲ್ಲಿ ಉಂಟಾದ ರಾದ್ಧಾಂತದಿಂದ ಇದೀಗ ಎರಡು ಕುಟುಂಬದವರು ಪೊಲೀಸ್‌ ಠಾಣಾ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ.

ವಧುವಿನ ಮನೆಯವರು ವರನ ʼಜೂಥಾ ಚುಪಾಯಿʼ ಆಚರಣೆ ಸಂದರ್ಭದಲ್ಲಿ ಗಲಾಟೆ ನಡೆದಿದೆ. ವರ ಮುಹಮ್ಮದ್‌ ಶಬೀರ್‌ ಶನಿವಾರ ತನ್ನ ಕುಟುಂಬದವರ ಜೊತೆ ಮದುವೆ ಮೆರವಣಿಗೆಯಲ್ಲಿ ಬಿಜ್ನೋರ್‌ ಬಂದಿದ್ದು, ಈ ಸಮಯದಲ್ಲಿ ಮದುವೆಯ ವಿಧಿವಿಧಾನಗಳು ನಡೆಯುತ್ತಿದ್ದಾಗ, ವಧುವಿನ ಅತ್ತಿಗೆ ಶಬೀರ್‌ ಅವರ ಶೂ ಕದ್ದು ಅಡಗಿಸಿಟ್ಟಿದ್ದಾರೆ.

ವರ ತನ್ನ ಶೂ ವಾಪಾಸ್‌ ಪಡೆಯಲು ವಧುವಿನ ಕಡೆಯವರು ಹೇಳಿದ್ದಷ್ಟು ಹಣ ನೀಡಬೇಕು, ವಧುವಿನ ಸಂಬಂಧಿಕರು ವರನ ಬಳಿ 50 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದು, ವರ 50 ಸಾವಿರದ ಬದಲಿಗೆ 5 ಸಾವಿರ ರೂಪಾಯಿಯನ್ನು ನೀಡಿದ್ದು, ಗಲಾಟೆಗೆ ಕಾರಣವಾಗಿದ್ದು, ವರನನ್ನು ಭಿಕ್ಷುಕ ಎಂದು ಹೀಯಾಳಿಸಿದ್ದಾರೆ. ಈ ಸಂದರ್ಭದಲ್ಲಿ ಎರಡೂ ಕುಟುಂಬಗಳ ನಡುವೆ ಜಗಳ ಜೋರಾಗಿ ನಡೆದಿದೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಕಡೆಯವರನ್ನು ಸಮಾಧಾನ ಮಾಡಿಸಿದ್ದಾರೆ. ಎರಡೂ ಕುಟುಂಬಗಳ ನಡುವೆ ಸಮಸ್ಯೆ ಇತ್ಯರ್ಥವಾಗಿದೆ ಎಂದು ವರದಿಯಾಗಿದೆ.

You may also like