Home » Gruha jyothi scheme : ಗೃಹಜ್ಯೋತಿ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್- ಇಂಧನ ಸಚಿವರು ಕೊಟ್ರು ಬಿಗ್ ಅಪ್ಡೇಟ್ !

Gruha jyothi scheme : ಗೃಹಜ್ಯೋತಿ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್- ಇಂಧನ ಸಚಿವರು ಕೊಟ್ರು ಬಿಗ್ ಅಪ್ಡೇಟ್ !

0 comments
Gruha jyothi scheme

Gruha jyothi scheme: ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಪ್ರಮುಖವಾಗಿರುವಂತಹ ಗೃಹಜ್ಯೋತಿ ಯೋಜನೆಗೆ (Gruha jyothi scheme) ಈಗಾಗಲೇ ಚಾಲನೆ ಸಿಕ್ಕಿ, ಜನರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಒಂದೆರಡು ತಿಂಗಳಿಂದ ನಾಡಿನ ಜನರು ಉಚಿತ ವಿದ್ಯುತ್ ಅನ್ನು ಪಡೆಯುತಿದ್ದಾರೆ. ಇದೀಗ ಗೃಹಜ್ಯೋತಿ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಇಂಧನ ಸಚಿವರು ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.

ಇಂದು(ಬುಧವಾರ) ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ದಾಸೇನಹಳ್ಳಿಯಲ್ಲಿ ಸೋಲಾರ್ ಪ್ಲಾಂಟ್‍ಗಾಗಿ ಜಾಗ ವೀಕ್ಷಿಸಿ ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು, ಸಬ್‍ಸ್ಟೇಷನ್ 500 ಮೀಟರ್ ವ್ಯಾಪ್ತಿಯೊಳಗಿನ ಸರ್ಕಾರಿ ಜಾಗದಲ್ಲಿ ಅಥವಾ ಖಾಸಗಿ ಜಾಗವನ್ನು ಲಿಸ್ ಪಡೆದು ಆ ಸ್ಥಳದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡಿ ರೈತರ ಪಂಪ್ ಸೆಟ್‍ಗಳಿಗೆ ವಿದ್ಯುತ್ ಒದಗಿಸಲಾಗುವುದು ಎಂದು ತಿಳಿಸಿದರು.

ನಮ್ಮ ರಾಜ್ಯದಲ್ಲಿ 34 ಲಕ್ಷ ನೀರಾವರಿ ಪಂಪ್ ಸೆಟ್‍ಗಳಿವೆ. 4 ಲಕ್ಷ ಪಂಪ್ ಸೆಟ್‍ಗಳು ಅಕ್ರಮ ಸಕ್ರಮಕ್ಕೆ ಅರ್ಜಿ ಬಂದಿದೆ. ಅರಸೀಕೆರೆ ತಾಲ್ಲೂಕಿನಲ್ಲಿ 24,926 ಸಾವಿರ ಪಂಪ್ ಸೆಟ್‍ಗಳಿವೆ. ಇದರಲ್ಲಿ 3932 ರೈತರು ಅಕ್ರಮ ಸಕ್ರಮಕ್ಕಾಗಿ ಹಣ ಕಟ್ಟಿ ಅರ್ಜಿ ಸಲ್ಲಿಸಿದ್ದು, 2180 ಪಂಪ್ ಸೆಟ್‍ಗಳನ್ನು ಸಕ್ರಮಗೊಳಿಸಲಾಗಿದೆ. 1750 ಅರ್ಜಿ ಬಾಕಿ ಇವೆ ಎಂದರು.

1661 ಪಂಪ್ ಸೆಟ್‍ಗಳು ಸಬ್‍ಸ್ಟೇಷನ್ 500 ಮೀಟರ್ ವ್ಯಾಪ್ತಿಯೊಳಗಿವೆ. ಸಮೀಪವೇ ಸೋಲಾರ್ ಪ್ಲಾಂಟ್ ಮಾಡಿ ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಎಂದ ಸಚಿವರು ಸರ್ಕಾರಿ ಜಾಗ ಲಭ್ಯವಿಲ್ಲದ್ದಿದ್ದಲ್ಲಿ ಖಾಸಗಿಯವರು ಸ್ವ-ಇಚ್ಚೇಯಿಂದ ಜಮೀನು ನೀಡಲು ಮುಂದೆ ಬಂದರೆ ಲೀಸ್ ಪಡೆದು ಸೋಲಾರ್ ಪ್ಲಾಂಟ್ ಅಳವಡಿಸಲಾಗುವುದು ಎಂದು ತಿಳಿಸಿದರು. ಎಲ್ಲಾ ರೈತರಿಗು ವಿದ್ಯುತ್ ನೀಡಲು ಕ್ರಮವಹಿಸುತ್ತೇವೆ. ಹಗಲಿನಲ್ಲಿ ರೈತರಿಗೆ ಏಳು ಗಂಟೆ ವಿದ್ಯುತ್ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

 

ಇದನ್ನು ಓದಿ: Poultry Farming : ಕೋಳಿ ಸಾಕಣೆದಾರರೇ ಇತ್ತ ಗಮನಿಸಿ – ಕಡಿಮೆ ಖರ್ಚು, ಹೆಚ್ಚು ಆದಾಯ ಗಳಿಸೋ ವಿನೂತನ ಪ್ರಯತ್ನದ ಬಗ್ಗೆ ತಿಳಿಯಿರಿ !

You may also like

Leave a Comment