Home » Gruhajyothi Scheme ಗೃಹಜ್ಯೋತಿ ಗ್ರಾಹಕರಿಗೆ ಶಾಕ್: ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸಿದವರಿಗೆ ಎಎಸ್‌ಡಿ ಪಾವತಿ ಕಡ್ಡಾಯ!

Gruhajyothi Scheme ಗೃಹಜ್ಯೋತಿ ಗ್ರಾಹಕರಿಗೆ ಶಾಕ್: ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸಿದವರಿಗೆ ಎಎಸ್‌ಡಿ ಪಾವತಿ ಕಡ್ಡಾಯ!

0 comments
Gruhajyothi Scheme

Gruhajyothi Scheme: ಗೃಹ ಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಬಳಸುತ್ತಿರುವವರಿಗೆ ವಿದ್ಯುತ್ ಇಲಾಖೆ ಶಾಕ್ ನೀಡಿದೆ. ಹೌದು, ಗೃಹ ಜ್ಯೋತಿ ಯೋಜನೆಯ (Gruhajyothi Scheme)  ಸೌಲಭ್ಯ ಪಡೆದು, ನಿಗದಿತ ಯುನಿಟ್‌ಗಿಂತ ಅಧಿಕ ವಿದ್ಯುತ್ ಬಳಸುತ್ತಿರುವ ಗ್ರಾಹಕರಿಂದ ಹೆಚ್ಚುವರಿ ಭದ್ರತಾ ಠೇವಣಿಯನ್ನು ವಸೂಲಿ ಮಾಡಲಾಗುತ್ತಿದೆ.

ಸದ್ಯ, ಗೃಹಜ್ಯೋತಿ ವಿದ್ಯುತ್ ಯೋಜನೆ ಸೌಲಭ್ಯ ಪಡೆದು ನಿಗದಿತ ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸಿದವರಿಗೆ ಈಗ ಹೆಚ್ಚುವರಿ ಭದ್ರತಾ ಠೇವಣಿ (ಎಎಸ್‌ಡಿ) ಇರಿಸಲಾಗಿದ್ದು, ಇಲ್ಲಿ ಸರಕಾರ ನಿಗದಿ ಮಾಡಿದ್ದ ಮಾಸಿಕ 10 ಯುನಿಟ್ ಹೆಚ್ಚುವರಿ ಉಚಿತ ವಿದ್ಯುತ್ ಬಳಸಿದ ಗ್ರಾಹಕರೂ ಎಎಸ್‌ಡಿ ಪಾವತಿಸುವುದು ಕಡ್ಡಾಯ ಆಗಿದೆ.

ಈಗಾಗಲೇ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ಗ್ರಾಹಕರು ಬಳಸಿದ ವಿದ್ಯುತ್ ಪ್ರಮಾಣ ಲೆಕ್ಕ ಹಾಕಿ ಜುಲೈ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ಹೆಚ್ಚುವರಿ ಭದ್ರತಾ ಠೇವಣಿಯ ಮೊತ್ತವನ್ನು ತೋರಿಸಿದೆ. ಪ್ರತೀ ಗ್ರಾಹಕ ಗೃಹ ಜ್ಯೋತಿ ವಿದ್ಯುತ್  ಬಳಕೆದಾರನಿಂದ 1000 ರೂ.ಗೂ ಅಧಿಕ ಮೊತ್ತದ ಎಎಸ್‌ಡಿ ನಿಗದಿಗೊಳಿಸಿವೆ. ಆದರೆ, ಈಗಾಗಲೇ ಸಂಗ್ರಹಿಸಿದ ಠೇವಣಿಯ ಬಡ್ಡಿ ಹಣವನ್ನು ಗ್ರಾಹಕರಿಗೆ ಮರು ಪಾವತಿಸುವ ಬಗ್ಗೆ ಪ್ರಸ್ತಾಪಿಸದಿರುವುದು ಚರ್ಚೆಗಳಿಗೆ ಕಾರಣವಾಗಿದೆ.

ಇನ್ನು ವಿದ್ಯುತ್ ಸಂಪರ್ಕ ಪಡೆದ ಗ್ರಾಹಕ 12 ತಿಂಗಳಲ್ಲಿ ಬಳಸಿದ ಸರಾಸರಿ ವಿದ್ಯುತ್ ಪ್ರಮಾಣ ಲೆಕ್ಕ ಹಾಕಿ ಅದರಲ್ಲಿ 2 ತಿಂಗಳ ಬಿಲ್ ಮೊತ್ತವನ್ನು ವಿದ್ಯುತ್ ಸರಬರಾಜು ಕಂಪನಿಗಳು ಭದ್ರತಾ ಠೇವಣಿ ಪಡೆದುಕೊಳ್ಳಲಿವೆ. ಆದರೆ, ಗೃಹಜ್ಯೋತಿ ಲಾಭ ಜನರಿಗೆ ತಲುಪುವಾಗ ಒಂದು ವರ್ಷದ ಸರಾಸರಿ ವಿದ್ಯುತ್ ಮೊತ್ತವನ್ನು ಪರಿಗಣಿಸಲಾಗಿತ್ತು. ಇದರ ಮೇಲೆ ಪ್ರತಿ ತಿಂಗಳು ಹೆಚ್ಚುವರಿಯಾಗಿ ಸರಕಾರ ನೀಡಿದ 10 ಯುನಿಟ್ ಉಚಿತ ವಿದ್ಯುತ್ ಅನ್ನು ಬಳಸಿದವರು ಈಗ ಎಎಸ್‌ಡಿ ಪಾವತಿಸಬೇಕಾಗಿದೆ.

ಅಲ್ಲದೇ ಈಗ ಪಡೆಯುತ್ತಿರುವ ಹೆಚ್ಚುವರಿ ಭದ್ರತಾ ಠೇವಣಿ ಪಾವತಿ ಗೃಹಬಳಕೆ ಗ್ರಾಹಕರಿಗೆ ಮಾತ್ರ ಸೀಮಿತವಾಗಿಲ್ಲ. ಜೊತೆಗೆ ಕೈಗಾರಿಕೆ, ವಾಣಿಜ್ಯ ವಿದ್ಯುತ್ ಬಳಕೆದಾರರೂ ಪಾವತಿಸಬೇಕಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

 

You may also like

Leave a Comment