Gruhalakshmi : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ಹಾಕಲಾಗುತ್ತಿದೆ. ಆದರೆ ಇದೀಗ ಬರೋಬ್ಬರಿ 2.13 ಲಕ್ಷ ಯಜಮಾನಿಯರಿಗೆ ಇನ್ಮುಂದೆ ಈ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಹೌದು, ಜೂನ್ 6, 2023ರ ಆದೇಶ ಹಾಗೂ ಜುಲೈ 17, 2023ರ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಮಾರ್ಗಸೂಚಿ ಅನ್ವಯ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿ ಮಾಡುತಿದ್ದರೆ ದಾರರಾಗಿದ್ದಲ್ಲಿ ಮತ್ತು ಜಿ.ಎಸ್.ಟಿ ರಿಟರ್ನ್ಸ್ ಸಲ್ಲಿಕೆ ಮಾಡುವವರಾಗಿದ್ದಲ್ಲಿ ಅವರಿನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ:Su From So: OTT ಗೆ ಬಂತು ʼಸು ಫ್ರಮ್ ಸೋʼ- 7 ನಿಮಿಷಗಳ ದೃಶ್ಯಕ್ಕೆ ಬಿತ್ತಾ ಕತ್ತರಿ?
ಅಂದಹಾಗೆ ಈವರೆಗೆ ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯಡಿ 2.13 ಲಕ್ಷ ಫಲಾನುಭವಿಗಳು ಐಟಿ/ಜಿಎಸ್‍ಟಿ ವ್ಯಾಪ್ತಿಗೊಳಪಡುತ್ತಾರೆ ಎಂದು ತಿಳಿದು ಬಂದಿರುತ್ತದೆ. ದಿನಾಂಕ: 15-07-2025ರ ಎಂಪಿಐಸಿ ಸಭೆಯಲ್ಲಿ ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿ ಎಂದು ಸ್ಟೆಟಸ್ ತೋರಿಸುತ್ತಿರುವ ಫಲಾನುಭವಿಗಳು ಐಟಿ/ಜಿಎಸ್‍ಟಿ ಟ್ಯಾಕ್ಸ್ ಪೇಯಿಗೆ ಒಳಪಡುವುದರಿಂದ ಅರ್ಜಿ ಪರಿಗಣಿಸಲು ಬರುವುದಿಲ್ಲ. ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯಡಿ ಇಂಥವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದಾರೆಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸೋಮವಾರಪೇಟೆ ಇವರ ಹಂತದಲ್ಲಿ ಹಿಂಬರಹ ನೀಡುವಂತೆ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
