Home » Gruhalakshmi Scheme: ಗೃಹಲಕ್ಷ್ಮೀ 2000 ರೂ. ನಿಮ್ಮ ಖಾತೆಗೆ ಬೀಳೋ ದಿನಾಂಕ ಫಿಕ್ಸ್ ; ಸರ್ಕಾರದ ಆದೇಶ !

Gruhalakshmi Scheme: ಗೃಹಲಕ್ಷ್ಮೀ 2000 ರೂ. ನಿಮ್ಮ ಖಾತೆಗೆ ಬೀಳೋ ದಿನಾಂಕ ಫಿಕ್ಸ್ ; ಸರ್ಕಾರದ ಆದೇಶ !

0 comments
Gruhalakshmi Scheme

Gruhalakshmi Scheme: ಆಗಸ್ಟ್ 15 ಇಂದು ಸ್ವಾತಂತ್ರ್ಯ ದಿನಾಚರಣೆ (Independance Day). ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಈ ದಿನದಂದು ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ಹೌದು, ಗೃಹಲಕ್ಷ್ಮೀ (Gruhalakshmi Scheme) 2000 ರೂ. ನಿಮ್ಮ ಖಾತೆಗೆ ಬೀಳೋ ದಿನಾಂಕ ಫಿಕ್ಸ್ ಆಗಿದೆ.

ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ಮಾಡಿದ್ದು, ಆ ಬಳಿಕ ರಾಜ್ಯದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ ಅವರು ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಬಡತನ ನಿರ್ಮೂಲನೆ ಕೆಲಸ ಮಾಡುತ್ತಿದೆ. ಈಗಾಗಲೇ ನೀಡಿರುವ ಆಶ್ವಾಸನೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದರು. ಜೊತೆಗೆ ಈ ಯೋಜನೆಗೆ ಚಾಲನೆ ಯಾವಾಗ? ಎಂಬುದನ್ನೂ ತಿಳಿಸಿದರು.

ಬಹು ನಿರೀಕ್ಷಿತ ಹಾಗೂ ಕಾತುರದಿಂದ ಕಾಯುತ್ತಿರುವ ಗೃಹಲಕ್ಷ್ಮಿ ಯೋಜನೆಗೆ (GruhaLakshmi Scheme) ಚಾಲನೆ ನೀಡುವ ಸಮಯ ಹತ್ತಿರದಲ್ಲೇ ಇದೆ. ಹೌದು, ಮಹಿಳೆಯರಿಗೆ 2,000 ರೂ. ಆರ್ಥಿಕ ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ 27 ರಂದು ಚಾಲನೆ ನೀಡಲಾಗುತ್ತಿದೆ. ಹಾಗೂ ಅದೇ ದಿನ ಮಹಿಳೆಯರ ಖಾತೆಗೆ 2,000 ರೂ ಜಮೆ ಆಗಲಿದೆ ಎಂದು ಸಿಎಂ ತಿಳಿಸಿದ್ದಾರೆ.

ಇದನ್ನೂ ಓದಿ: Thalapathy Vijay: ನಟ ವಿಜಯ್ ಬಾಳಲ್ಲಿ ಇನ್ನೊಬ್ಬ ನಟಿಯ ಎಂಟ್ರಿ? ಡಿವೋರ್ಸ್ ವಿಷಯ ನಿಜನಾ??

You may also like