Home » GST ಕಡಿತ ಎಫೆಕ್ಟ್ – ಕಡಿಮೆಯಾಗಿದೆಯಾ ಸೆಕೆಂಡ್ ಹ್ಯಾಂಡ್ ಕಾರುಗಳ ಬೆಲೆ?

GST ಕಡಿತ ಎಫೆಕ್ಟ್ – ಕಡಿಮೆಯಾಗಿದೆಯಾ ಸೆಕೆಂಡ್ ಹ್ಯಾಂಡ್ ಕಾರುಗಳ ಬೆಲೆ?

0 comments

GST: ಕೇಂದ್ರ ಸರ್ಕಾರವು ಬಿಎಸ್‌ಟಿ ಪರಿಷ್ಕರಣೆ ಮಾಡಿದ್ದು ಸೆಪ್ಟೆಂಬರ್ 22ರ ಬಳಿಕ ಇದು ಜಾರಿಯಾಗಿದೆ. ಈಗಾಗಲೇ ಹಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದ್ದು, ಹೊಸ ಕಾರುಗಳ ದರವಂತು ಸಿಕ್ಕಾಪಟ್ಟೆ ಕಡಿಮೆಯಾಗಿದೆ. ಹಾಗಾದರೆ ಸೆಕೆಂಡ್ ಹ್ಯಾಂಡ್ ಕಾರುಗಳ ಬೆಲೆಯೂ ಕೂಡ ಕಡಿಮೆಯಾಗಿದೆಯಾ? ಎಂದು ನೋಡೋಣ

ಹೌದು, ಸೆಪ್ಟೆಂಬರ್ 22 ರಿಂದ ಹೊಸ ವಾಹನಗಳು ಅಗ್ಗವಾಗಿದೆ. ಆದರೆ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ವೇದಿಕೆ ಸ್ಪಿನ್ನಿ (Spinny) ಜಿಎಸ್‌ಟಿ ಬದಲಾವಣೆಗಳಿಗೆ ಮುಂಚೆಯೇ ಬೆಲೆ ಬದಲಾವಣೆಗಳ ಕುರಿತು ಪ್ರಮುಖ ಘೋಷಣೆ ಮಾಡಿದೆ.

ಸೆಕೆಂಡ್ ಹ್ಯಾಂಡ್ ವಾಹನಗಳ ಮೇಲಿನ ಜಿಎಸ್‌ಟಿ ದರ (18%) ಬದಲಾಗದೆ ಉಳಿದಿದೆ ಎಂಬುದು ಗಮನಿಸಬೇಕಾದ ಸಂಗತಿ. ಸ್ಪಿನ್ನಿ ಬೆಲೆ ಕಡಿತವನ್ನು ಘೋಷಿಸಿದ್ದು, ಖರೀದಿದಾರರಿಗೆ ₹2 ಲಕ್ಷದವರೆಗೆ ಮತ್ತು ಮಾರಾಟಗಾರರಿಗೆ ಪ್ರತಿ ಕಾರಿಗೆ ₹20,000 ವರೆಗೆ ರಿಯಾಯಿತಿಯನ್ನು ನೀಡುತ್ತದೆ. ಹೊಸ ಜಿಎಸ್‌ಟಿ ದರಗಳು ಸಣ್ಣ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಮೇಲಿನ ತೆರಿಗೆಯನ್ನು ಶೇಕಡಾ 18ಕ್ಕೆ ಇಳಿಸಿದೆ.

ಇದನ್ನೂ ಓದಿ:Scholarship: SC/ST ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಆನ್ಲೈನ್ ಅರ್ಜಿ ಆಹ್ವಾನ

ಹಾಗೂ ಆಟೋ ಘಟಕಗಳ (ಭಾಗಗಳು) ಮೇಲಿನ ಜಿಎಸ್‌ಟಿಯನ್ನು ಸಹ ಶೇಕಡಾ 28 ರಿಂದ 18 ಕ್ಕೆ ಇಳಿಸಲಾಗಿದೆ. ಸದ್ಯ ಮಾರುತಿ ಸುಜುಕಿಯ ಕಾರುಗಳ ಬೆಲೆ 1.29 ಲಕ್ಷ ರೂವರೆಗೆ ಇಳಿಕೆ ಆಗಲಿದೆ. ಆಡಿ ಕಾರುಗಳ ಬೆಲೆ 10 ಲಕ್ಷ ರೂವರೆಗೆ ಇಳಿಕೆಯಾಗಲಿದೆ. ಮರ್ಸಿಡೆಸ್ ಬೆಂಜ್, ಲ್ಯಾಂಡ್ ರೋವರ್ ಬ್ರ್ಯಾಂಡ್​ನ ಕೆಲ ಕಾರುಗಳ ಬೆಲೆ 30 ಲಕ್ಷ ರೂವರೆಗೂ ಇಳಿಕೆ ಆಗಲಿದೆ. ಹೊಸ ಕಾರು ಖರೀದಿಸುವ ಇರಾದೆಯವರು ಸೆಪ್ಟೆಂಬರ್ 22ರವರೆಗೂ ಕಾದರೆ ತುಸು ಅಗ್ಗದ ಬೆಲೆಯಲ್ಲಿ ಪಡೆಯಬಹುದಾಗಿದೆ.

You may also like