Home » Digaleshwara Shri: ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದ ಮಠಗಳಿಗೆ ಹೊಡೆತ – ಪ್ರಬಲ ಸ್ವಾಮೀಜಿ ಬೇಸರ

Digaleshwara Shri: ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದ ಮಠಗಳಿಗೆ ಹೊಡೆತ – ಪ್ರಬಲ ಸ್ವಾಮೀಜಿ ಬೇಸರ

0 comments

Digaleshwara Shri: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಠಮಾನ್ಯಗಳಿಗೆ ದೊಡ್ಡ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಗದಗ ವಿರೇಶ್ವರ ಪುಣ್ಯಾಶ್ರಮದಲ್ಲಿ ಪುಟ್ಟರಾಜ ಗವಾಯಿ, ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಜಾತ್ರೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ಗ್ಯಾರಂಟಿಯಿಂದ ಜನ ಬಂದು ಆಶ್ರಮದಲ್ಲಿ ಊಟ ಮಾಡುತ್ತಿದ್ದಾರೆ. ಮಠದಲ್ಲಿ ಊಟ ಮಾಡುವವರ ಸಂಖ್ಯೆ ನೂರು ಪಟ್ಟು ಹೆಚ್ಚಾಗಿದೆ. ಉಚಿತ ಯೋಜನೆಗಳು ಮಠದ ಖರ್ಚಿಗೆ ಹೊರೆಯಾಗಿವೆ. ಪ್ರಸಾದ ವ್ಯವಸ್ಥೆ ನೂರು ಪಟ್ಟು ಹೆಚ್ಚಾಗಿದೆ. ಸರ್ಕಾರ ಮಾಡುವ ಕೆಲಸವನ್ನೇ ಮಠಗಳು ಮಾಡುತ್ತಿವೆ. ಹೀಗಾಗಿ ಪುಣ್ಯಶ್ರಮಕ್ಕೆ ಸರ್ಕಾರ ಅನಾದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

You may also like