Home » Viral Video । ಈಕೆಯೇ ನೋಡಿ ವಿಶ್ವದಲ್ಲೇ ‘ದೊಡ್ಡ ಬಾಯಿ’ ಯ ಯುವತಿ, ದೊಡ್ಡ ವಸ್ತುಗಳನ್ನೂ ಅಡ್ಡಡ್ಡ ನುಂಗುವ ಈಕೆಯ ಹೆಸರಿಗೆ ಬಿತ್ತು ಗಿನ್ನೆಸ್ ದಾಖಲೆ !

Viral Video । ಈಕೆಯೇ ನೋಡಿ ವಿಶ್ವದಲ್ಲೇ ‘ದೊಡ್ಡ ಬಾಯಿ’ ಯ ಯುವತಿ, ದೊಡ್ಡ ವಸ್ತುಗಳನ್ನೂ ಅಡ್ಡಡ್ಡ ನುಂಗುವ ಈಕೆಯ ಹೆಸರಿಗೆ ಬಿತ್ತು ಗಿನ್ನೆಸ್ ದಾಖಲೆ !

0 comments

ಮಹಿಳೆಯರಿಗೆ ಸಹಜವಾಗಿ ಮಾತಾಡುವ ಕಲೆ ಸಿದ್ದಿತ. ಒಳ್ಳೆಯ ಭಾಷೆ ಬಳಸಿ ಮಾತಾಡೋದು ಮಾತ್ರವಲ್ಲ, ವೇಗವಾಗಿ, ನಿರರ್ಗಳವಾಗಿ ಮತ್ತು ನಿರಂತರವಾಗಿ ಕೂಡಾ ಅವರು ಮಾತಾಡಬಲ್ಲರು. ಅದಕ್ಕೆ ಎಷ್ಟೋ ಸಲ ಅವರಿಗೆ ‘ ದೊಡ್ಡ ಬಾಯಿ ‘ ಎಂಬ ಬಿರುದು ಕೂಡಾ ಬರೋದುಂಟು. ಆದರೆ ಇಲ್ಲೊಬ್ಬಳು ನಿಜಕ್ಕೂ ದೊಡ್ಡ ಬಾಯಿಯವಳಿದ್ದಾಳೆ. ಆಕೆಯ ಬಾಯಿಯ ಸುತ್ತಳತೆ ಸುಮಾರು 6.52 ಸೆಂ.ಮೀ ನಷ್ಟಿದೆ.

ಇದೀಗ ಈ ಮಹಿಳೆ ತನ್ನ ದೊಡ್ಡ ಬಾಯಿಯಿಂದ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾರೆ. ಈಕೆಯ ಹೆಸರು ಸಮಂತಾ ರಾಮ್ ಡೆಲ್ (32) ಎಂದಾಗಿದ್ದು, 2021 ರ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ರಲ್ಲಿ ಸಮಂತಾ ರಾಮ್‌ ಡೆಲ್ ದೊಡ್ಡ ಬಾಯಿ ಹೊಂದಿರುವ ಮಹಿಳೆ ಎಂಬ ದಾಖಲೆಯನ್ನು ಪಡೆದಿದ್ದಾರೆ.

ಸಾಮಾನ್ಯವಾಗಿ ನಾವೆಲ್ಲಾ ಹಣ್ಣುಗಳನ್ನು ಕಟ್ ಮಾಡಿ ನಂತರವೇ ಅದನ್ನು ಸ್ವಲ್ಪ ಸ್ವಲ್ಪವಾಗಿ ತಿನ್ನಲು ಸಾಧ್ಯ. ಆದರೆ ಸಮಂತಾ ಅವರ ಬಾಯಿಯಲ್ಲಿ ಹಣ್ಣು, ಸಿಹಿತಿಂಡಿಗಳನ್ನ ಸ್ವಲ್ಪವೂ ಪೀಸ್ ಮಾಡದೆ ಹಾಗೇ ಪೂರ್ತಿಯಾಗಿ ಇಡಬಹುದು. ಇದರ ವಿಡಿಯೋವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ದೊಡ್ಡ ಬಾಯಿ’ ಎಂಬ ಬಿರುದು ಪಡೆದಿರುವ ಸಮಂತಾ ಅವರ ಕುಟುಂಬದಲ್ಲಿ ಹಲವರಿಗೆ ಈ ರೀತಿಯ ದೊಡ್ಡ ಬಾಯಿ ಇದೆಯಂತೆ. ಆದರೆ ಇವರೆಲ್ಲರಿಗಿಂತ ಸಮಂತಾಳ ಬಾಯಿ ದೊಡ್ಡದು ಎನ್ನುತ್ತಾರೆ. ಈಕೆಗೆ ಮೊದಲಿನಿಂದಲೂ ತಮ್ಮ ಬಾಯಿಯ ಬಗ್ಗೆ ತುಂಬಾ ಬೇಸರವಿತ್ತು, ಇತರರ ಹಾಗೆ ತನ್ನ ಬಾಯಿಯ ಆಕಾರ ಇಲ್ಲವೆಂದು ಮನದಲ್ಲಿ ಅಳುಕು ಇತ್ತು. ಅಲ್ಲದೆ, ಹಲವರು ಸಮಂತಾ ಅವರ ದೊಡ್ಡ ಬಾಯಿಗೆ ಅಪಹಾಸ್ಯ ಮಾಡುತ್ತಿದ್ದರು. ಆದರೆ ಮೊದಲು ಬೇಸರ ತಂದರೂ ಇದೀಗ ತನ್ನ ದೊಡ್ಡ ಬಾಯಿ ನನಗೆ ತುಂಬಾ ಖುಷಿ ಕೊಟ್ಟಿದೆ ಎಂದು ಸಮಂತಾ ಹೇಳುತ್ತಾರೆ.

ದೊಡ್ಡ ಬಾಯಿ ಹೊಂದಿರುವ ಸಮಂತಾ ಅವರ ವಿಡಿಯೋವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ವೀಕ್ಷಣೆ ಗಳಿಸಿದ್ದು, ವೀಕ್ಷಕರು ವಿಭಿನ್ನ ಕಾಮೆಂಟ್ ಗಳನ್ನು ನೀಡಿದ್ದಾರೆ.

https://www.instagram.com/reel/CmSFkI1DEXv/?igshid=Yzg5MTU1MDY=

You may also like

Leave a Comment