Home » Earthquake: ಗುಜರಾತ್: ಬೆಳ್ಳಂಬೆಳಗ್ಗೆ 3.4 ತೀವ್ರತೆಯ ಭೂಕಂಪ!

Earthquake: ಗುಜರಾತ್: ಬೆಳ್ಳಂಬೆಳಗ್ಗೆ 3.4 ತೀವ್ರತೆಯ ಭೂಕಂಪ!

0 comments
Earthquake

Earthquake: ಗುಜರಾತ್ ನ ಬನಸ್ಕಾಂತ ಜಿಲ್ಲೆಯ ವಾವ್‌ ಬಳಿ ಮುಂಜಾನೆ 3.35ರ ಸುಮಾರಿಗೆ 3.4 ತೀವ್ರತೆಯ ಭೂಕಂಪನ (Earthquake) ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ಸಂಶೋಧನಾ ಸಂಸ್ಥೆ ವರದಿ ಮಾಡಿದೆ.

ಭೂಕಂಪಶಾಸ್ತ್ರದ ವರದಿ ಪ್ರಕಾರ, ವಾಮ್ಮಿಂದ ಪೂರ್ವ-ಈಶಾನ್ಯಕ್ಕೆ (ಇಎನ್‌ಇ) 27 ಕಿ.ಮೀ ದೂರದಲ್ಲಿ 4.9 ಕಿ.ಮೀ ಆಳದಲ್ಲಿ ಭೂಕಂಪನ ದಾಖಲಾಗಿದೆ. ಇನ್ನು ಕಳೆದ 200 ವರ್ಷಗಳಲ್ಲಿ ಒಂಬತ್ತು ಪ್ರಮುಖ ಭೂಕಂಪಗಳಿಗೆ ಆಗಿದೆ ಎನ್ನಲಾಗಿದೆ.

ಭೂಕಂಪದಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ.

You may also like