Home » Heart attack: ಪರೀಕ್ಷೆ ಬರೆಯಲೆಂದು ಬಂದ 9 ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ, ಸಾವು!!!

Heart attack: ಪರೀಕ್ಷೆ ಬರೆಯಲೆಂದು ಬಂದ 9 ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ, ಸಾವು!!!

by Mallika
1 comment
Heart attack

Heart attack: 15 ವರ್ಷದ ಬಾಲಕಿಯೋರ್ವಳು ಶಾಲೆಗೆ ಹಾಜರಾಗುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.

9ನೇ ತರಗತಿಯ ಬಾಲಕಿ ಜಸ್ದಾನ್‌ ತಾಲೂಕಿನ ಸಾಕ್ಷಿ ರಾಜೋಸಾರಾ ಎಂದು ಗುರುತಿಸಲಾಗಿದೆ. ಪರೀಕ್ಷೆ ಇದ್ದುದರಿಂದ ಪರೀಕ್ಷೆ ಕೊಠಡಿಗೆ ಎಂಟ್ರಿ ಕೊಡುತ್ತಿದ್ದಂತೆ ಎದೆನೋವು (Heart attack) ಎಂದು ಹೇಳಿದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ವೈದ್ಯರು ಆಕೆ ಮೃತ ಹೊಂದಿದ್ದಾಳೆಂದು ಘೋಷಣೆ ಮಾಡಿದ್ದಾರೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಜನರಲ್ಲಿ ನಿಜಕ್ಕೂ ಭಯ ಹೆಚ್ಚಾಗಿದೆ ಎಂದೇ ಹೇಳಬಹುದು. ಇತ್ತೀಚೆಗೆ ಕೆಲವು ತಿಂಗಳಿನಿಂದ ಯುವ ಜನತೆಯಲ್ಲಿ ಹೃದಯ ಸ್ತಂಭನದ ಘಟನೆಗಳು ಹೆಚ್ಚಾಗುತ್ತಿದೆ. ಗುಜರಾತ್‌ನ ರಾಜ್ಕೋಟ್‌ ನಲ್ಲಿ ಹೃದಯಾಘಾತ ಪ್ರಕರಣ ವಿಶೇಷವಾಗಿ ಹೆಚ್ಚು ಸಂಭವಿಸಿದೆ ಎಂದು ವರದಿಯಾಗಿದೆ.

 

ಇದನ್ನು ಓದಿ: Ration Card: ರೇಷನ್ ಕಾರ್ಡ್ ದಾರರಿಗೆ ಉಚಿತ ಪಡಿತರ ಕುರಿತು ಕೇಂದ್ರದಿಂದ ಬಂತು ಭರ್ಜರಿ ಗುಡ್ ನ್ಯೂಸ್ – ಪ್ರಧಾನಿ ಮೋದಿಯಿಂದ ಮಹತ್ವದ ಘೋಷಣೆ !!

You may also like

Leave a Comment