Home » ಛತ್ತೀಸ್ ಗಢದಲ್ಲಿ ಗುಂಡಿನ ಚಕಮಕಿ: 26 ನಕ್ಸಲರ ಹತ್ಯೆ

ಛತ್ತೀಸ್ ಗಢದಲ್ಲಿ ಗುಂಡಿನ ಚಕಮಕಿ: 26 ನಕ್ಸಲರ ಹತ್ಯೆ

0 comments

Chhattisgarh: ರಾಜ್ಯ ಪೊಲೀಸರು ಬಹಳ ದೊಡ್ಡ ಪ್ರಮಾಣದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿದ್ದು, ನಾರಾಯಣ್ ಪುರ-ಬಿಜಾಪುರ್ ಗಡಿಯಲ್ಲಿ ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 26 ನಕ್ಸಲರು ಮೃತಪಟ್ಟಿದ್ದಾರೆ.

ಈ ಒಂದು ಗುಂಡಿನ ಚಕಮಕಿಯಲ್ಲಿ ಪೊಲೀಸರ ಬೆಂಬಲಿಗರೊಬ್ಬರು ಮೃತಪಟ್ಟಿದ್ದು, ಓರ್ವ ಪೊಲೀಸ್ ಅಧಿಕಾರಿಗೆ ಗಾಯವಾಗಿದೆ ಎಂದು ಪೊಲೀಸರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ನಾರಾಯಣ್ ಪುರ, ಬಿಜಾಪುರ್, ದಂತೇವಾಡ ಮತ್ತು ಕಾಂಕೇರ್ ಜಿಲ್ಲೆಗಳಿಂದ ಜಿಲ್ಲಾ ಮೀಸಲು ಪಡೆ ಮೇಲೆ ಶಸ್ತ್ರಸಜ್ಜಿತ ಮಾವೋವಾದಿಗಳು ಹೊಂಚು ಹಾಕಿರುವುದಾಗಿಯೂ, ಮಾವೋವಾದಿಗಳ ‘ಮ್ಯಾಡ್’ ವಿಭಾಗದ ಹಿರಿಯ ಕಾರ್ಯಕರ್ತರು ಇರುವುದರ ಕುರಿತಾಗಿ ಗುಪ್ತಚರ ಮಾಹಿತಿ ಸಿಕ್ಕಿರುವ ಕಾರಣದಿಂದ ಭದ್ರತಾ ಪಡೆಗಳು ಪ್ರಸಿದ್ಧ ನಕ್ಸಲೀಯ ಭದ್ರಕೋಟೆಯಾದ ಅಭುಜ್‌ಮದ್ ಪ್ರದೇಶದೊಳಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.

ಹಾಗೂ ಅವರ ತಂಡ ನಕ್ಸಲರ ಅಡಗುತಾಣದ ಬಳಿ ಹೋದಾಗ ನಕ್ಸಲರು ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದ್ದು, ಇತ್ತ ಈ ಕಡೆಯಿಂದಲೂ ಗುಂಡುಗಳು ಹಾರಿರುತ್ತವೆ. ಹಾಗೂ ಇದರಿಂದಾಗಿ 26 ಕ್ಕೂ ಹೆಚ್ಚು ಮಾವೋವಾದಿಗಳು ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

You may also like