Home » Mantralaya: ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ: ಭಕ್ತರಿಂದ ಬೃಹತ್ ರಂಗೋಲಿ ಸೇವೆ

Mantralaya: ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ: ಭಕ್ತರಿಂದ ಬೃಹತ್ ರಂಗೋಲಿ ಸೇವೆ

by ಕಾವ್ಯ ವಾಣಿ
0 comments

Mantralaya: ಮಂತ್ರಾಲಯದಲ್ಲಿ (Mantralaya) ರಾಯರ ಗುರುವೈಭವೋತ್ಸವ ಸಂಭ್ರಮ ಮನೆ ಮಾಡಿದ್ದು, ಭಕ್ತರು ವಿಶೇಷ ಸೇವೆಗಳನ್ನ ಸಲ್ಲಿಸುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮಳೂರು ಗ್ರಾಮದ ಭಕ್ತರು ಗುರು ವೈಭವೋತ್ಸವ ಸಂಭ್ರಮ ಹಿನ್ನೆಲೆ ವಿಶೇಷ ಬೃಹತ್ ರಂಗೋಲಿ ಸೇವೆ ನಡೆಯಿತು.

ಮಾ.1 ರ ರಾತ್ರಿ 10 ಗಂಟೆಯಿಂದ ಇಂದು ಬೆಳಗ್ಗೆ 7 ಗಂಟೆ ವರೆಗೂ ರಂಗೋಲಿ ಸೇವೆ ಮಾಡಿ ಬೃಹತ್ ರಂಗೋಲಿ ಬಿಡಿಸಿದ್ದಾರೆ. ಏಳು ಜನರ ತಂಡ ವಿಶೇಷ ರಂಗೋಲಿ ಸೇವೆಯನ್ನ ನೆರವೇರಿಸಿದೆ. ಸುವರ್ಣ ಕೇಶವ್, ಅಮೃತ, ಜ್ಯೋತಿ, ಮಂಗಳ ಪ್ರೇಮಲತಾ, ಗುರುರಾಜ್, ಸುರೇಶ್ ಎಂಬವರ ತಂಡ ರಂಗೋಲಿ ಸೇವೆ ಮಾಡಿದೆ.

You may also like