4
Lucknow: ಉತ್ತರ ಪ್ರದೇಶದ ವಿಧಾನಸಭೆ ಒಳಗೇ ಶಾಸಕರೊಬ್ಬರು ಗುಟ್ಕಾ ಜಗಿದು ಉಗಿದ ಘಟನೆ ಬೆನ್ನಲ್ಲೇ ಅಸೆಂಬ್ಲಿಯಲ್ಲಿ ಇನ್ನು ಮುಂದೆ ಪಾನ್ ಮಸಾಲಾ, ಗುಟ್ಕಾ ಜಗಿಯುವುದರ ಮೇಲೆ ಸ್ಪೀಕರ್ ನಿಷೇಧ ಹೇರಿದ್ದಾರೆ. ಅಲ್ಲದೇ ಒಂದು ವೇಳೆ ಉಲ್ಲಂಘಿಸಿದಲ್ಲಿ 1000 ರೂ. ದಂಡ ಹೇರುವುದಾಗಿ ಹೇಳಿದ್ದಾರೆ.
ಬುಧವಾರ ವಿಧಾನಸಭೆಯ ಒಳಗೇ ಶಾಸಕರೊಬ್ಬರು ಗುಟ್ಕಾ ಉಗಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸ್ಪೀಕರ್ ಸತೀಶ್ ಮಹಾನಾ, ʼಗುಟ್ಕಾ ಉಗಿದ ಶಾಸಕರ ತಪ್ಪೊಪ್ಪಿಗೊಳ್ಳದಿದ್ದರೆ, ಹೆಸರು ಬಹಿರಂಗ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೇ ತಮ್ಮ ಕೈ ಯಾರೆ ಗಲೀಜು ಸ್ವಚ್ಛಗೊಳಿಸಿದ್ದರು.
