Home » ತನ್ನ ಸೌಂದರ್ಯದ ಭಾಗವನ್ನೇ ದಾನ ನೀಡಿದ ಬಾಲಕಿ!! ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡವರ ಪಾಲಿಗೆ ಬೆಳಕಾದ ಮಂಗಳೂರಿನ ಕುವರಿ

ತನ್ನ ಸೌಂದರ್ಯದ ಭಾಗವನ್ನೇ ದಾನ ನೀಡಿದ ಬಾಲಕಿ!! ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡವರ ಪಾಲಿಗೆ ಬೆಳಕಾದ ಮಂಗಳೂರಿನ ಕುವರಿ

0 comments

ಕ್ಯಾನ್ಸರ್ ಮಾರಕಕ್ಕೆ ಅದೆಷ್ಟೋ ಮಂದಿ ತಮ್ಮ ಪ್ರಾಣ ತೆತ್ತಿದ್ದಾರೆ, ಅದೆಷ್ಟೋ ಮಂದಿ ತಮ್ಮ ಉಳಿವಿಗಾಗಿ ಕೇಶ ಮುಂಡನೆಯನ್ನು ಮಾಡಿದ್ದಾರೆ.ಸದ್ಯ ಮಾರಕ ರೋಗದಿಂದ ಕೂದಲು ಕಳೆದುಕೊಂಡವರಿಗೆ ನೇರವಾಗಲೆಂದು ಇಲ್ಲೊಬ್ಬ ಬಾಲಕಿ ತನ್ನ ಸೌಂದರ್ಯ ಕೆಟ್ಟರೂ ಅಡ್ಡಿಯಿಲ್ಲ, ಇತರರಿಗೆ ಸಹಾಯ ಮಾಡೋಣವೆಂದು ಕೂದಲನ್ನು ದಾನ ಮಾಡಿದ್ದು, ಸುಮಾರು ಎರಡು ವರ್ಷಗಳಿಂದ ಅದಕ್ಕೆಂದೇ ಕೂದಲನ್ನು ಬೆಳೆಸಿ,ಕೂದಲನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾಳೆ.

ಕಣ್ಣೂರು ಜಿಲ್ಲೆಯ ಪಯ್ಯನೂರಿನ ಸದ್ಯ ಮಂಗಳೂರಿನ ಎಕ್ಕೂರಿನಲ್ಲಿ ನೆಲೆಸಿರುವ ಮಂಗಳೂರು ಕೇಂದ್ರೀಯ ಶಾಲಾ ಆರನೇ ತರಗತಿ ವಿದ್ಯಾರ್ಥಿನಿ ಡಿಲ್ನ ಎಂಬಾಕೆಯೇ ಈ ಬಾಲಕಿ. ತನ್ನ ಒಂಭತ್ತನೇ ಪ್ರಾಯದಲ್ಲಿ ಕೂದಲು ದಾನಕ್ಕೆ ನಿರ್ಧರಿಸಿದ್ದ ಈಕೆ, ತನ್ನ 11ನೇ ಹುಟ್ಟುಹಬ್ಬಕ್ಕೆ ಬಡ ರೋಗಿಗಳಿಗೆ ತನ್ನ ಕೂದಳನ್ನೇ ದಾನ ಮಾಡಿದ್ದಾಳೆ.

ಕೇರಳದ ತ್ರಿಶೂರ್ ಮಿರಾಕಲ್ ಚಾರಿಟೇಬಲ್ ಅಸೋಸಿಯೇಷನ್ ನೇತೃತ್ವದಲ್ಲಿ ತನ್ನ ಕೂದಲನ್ನು ವಿಗ್ ತಯಾರಿಸಲು ಹೇರ್ ಬ್ಯಾಂಕ್ ಗೆ ಕಳುಹಿಸಿಕೊಡಲಾಗಿದೆ. ಸೌಂದರ್ಯದ ಒಂದು ಭಾಗವಾದ ಕೂದಲನ್ನು ದಾನ ಮಾಡಿರುವ ಬಾಲಕಿಯ ನಡೆಗೆ ಎಲ್ಲೆಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

You may also like

Leave a Comment