Home » Half day school holiday: ಮಾರ್ಚ್ 15ರಿಂದ ಮಧ್ಯಾಹ್ನದ ಬಳಿಕ ಶಾಲೆಗಳಿಗೆ ರಜೆ !!

Half day school holiday: ಮಾರ್ಚ್ 15ರಿಂದ ಮಧ್ಯಾಹ್ನದ ಬಳಿಕ ಶಾಲೆಗಳಿಗೆ ರಜೆ !!

0 comments
Half day school holiday

Half day school holiday: ಮಾರ್ಚ್ 15ರ ನಂತರ ತೆಲಂಗಾಣ ರಾಜ್ಯದ ಶಾಲೆಗಳಿಗೆ ರಾಜ್ಯದ ಶಿಕ್ಷಣ ಇಲಾಖೆಯು ಮಧ್ಯಾಹ್ನದ ಬಳಿಕ ರಜೆಯನ್ನು ಘೋಷಣೆ ಮಾಡಿದೆ. ಹೀಗಾಗಿ ರಾಜ್ಯದ ಶಾಲೆಗಳು ಮಧ್ಯಾಹ್ನದ ತನಕ ಮಾತ್ರ ಕಾರ್ಯನಿರ್ವಹಿಸಲಿವೆ.

 

ಹೌದು, ರಾಜ್ಯದಲ್ಲಿ ಹಗಲು ಬಿಸಿಲಿನ ತಾಪಕ್ಕೆ ಜನರು ಪರದಾಡುತ್ತಿದ್ದಾರೆ. ಆದರೆ ರಾತ್ರಿ ಮಾತ್ರ ತಡೆಯಲಾರದಷ್ಟು ಶೀತ ಉಂಟಾಗುತ್ತಿದೆ. ಈ ರೀತಿ ಸಡನ್ ಆಗಿ ಬಲಾಗುತ್ತಿರುವ ವಾತಾವರಣದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ತೆಲಂಗಾಣ ರಾಜ್ಯ ಶಿಕ್ಷಣ ಇಲಾಖೆ ಮಾರ್ಚ್ 15ರಿಂದ ಅರ್ಧ ದಿನ ಮಾತ್ರ ಶಾಲೆಯನ್ನು ನಡೆಸಲು ನಿರ್ಧರಿಸಿದ್ದು, ಮಧ್ಯಾಹ್ನದ ಬಳಿಕ ರಜೆ ನೀಡಲು ಸಿರ್ಧರಿಸಲಾಗಿದೆ(Half day school holiday)

 

ಅಂದಹಾಗೆ ಬಿಸಿಲ ಬೇಗೆಯಿಂದ ವಿದ್ಯಾರ್ಥಿಗಳಿಗೆ ಕಷ್ಟವಾಗಬಹುದು ಎಂದು ಮುಂದಾಲೋಚಿಸಿ, ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಸೌಕರ್ಯಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಈ ಬದಲಾವಣೆ ತರಲಾಗಿದೆ. ಇನ್ನು ಈ ವೇಳಾಪಟ್ಟಿ ಹೊಂದಾಣಿಕೆಯು ಮಾರ್ಚ್ 15ರಿಂದ ಏಪ್ರಿಲ್ 23 ರವರೆಗೆ ಜಾರಿಯಲ್ಲಿರುತ್ತದೆ. ತರಗತಿಗಳು ಬೆಳಿಗ್ಗೆ 8ರಿಂದ ಮಧ್ಯಾಹ್ನ 12:30 ರವರೆಗೆ ಮಾತ್ರ ನಡೆಯುತ್ತವೆ ಎಂದು ಸರ್ಕಾರ ಹೇಳಿದೆ.

You may also like

Leave a Comment