Home » Trivikram Mother : ‘ಹನುಮಂತನ ಗೆಲುವು ಸರಿಯಲ್ಲ’ – ಬಿಗ್ ಬಾಸ್ ವಿನ್ನರ್ ಮೇಲೆ ತ್ರಿವಿಕ್ರಂ ತಾಯಿ ಬೇಸರ!!

Trivikram Mother : ‘ಹನುಮಂತನ ಗೆಲುವು ಸರಿಯಲ್ಲ’ – ಬಿಗ್ ಬಾಸ್ ವಿನ್ನರ್ ಮೇಲೆ ತ್ರಿವಿಕ್ರಂ ತಾಯಿ ಬೇಸರ!!

0 comments

Trivikram Mother : ಕನ್ನಡದ ಬಿಗ್​ಬಾಸ್​ ಸೀಸನ್ 11ರ ವಿನ್ನರ್​ ಆಗಿ ಹನುಮಂತ ಹೊರ ಹೊಮ್ಮಿದ್ದಾರೆ. ರನ್ನರ್ ಅಪ್​ ಆಗಿ ತ್ರಿವಿಕ್ರಮ್​ ಹೊರ ಹೊಮ್ಮಿದ್ದಾರೆ. ಆದರೆ ಇದರ ಮಧ್ಯೆ ತ್ರಿವಿಕ್ರಮ್ ತಾಯಿ ಹನುಮಂತನ ಗೆಲುವಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಹೌದು, ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತಾಡಿದ ತ್ರಿವಿಕ್ರಮ್​ ತಾಯಿ ವನಜಾಕ್ಷಿ, ನನಗೆ ಹನುಮಂತನಲ್ಲಿ ಬೇರೆ ಏನೂ ಕಾಣಿಸಲಿಲ್ಲ. ಅವನಿಗೆ ಬಿಟ್ಟು ಬೇರೆ ಯಾರಿಗಾದ್ರೂ ಸಿಕ್ಕಿದರೆ ನನಗೆ ಖುಷಿ ಆಗುತ್ತಿತ್ತು. ನನ್ನ ಮಗನಿಗೆ ಸಿಕ್ಕಿಲ್ಲ ಅಂತ ಬೇಸರ ಇಲ್ಲ, ಅಷ್ಟು ಜನರಲ್ಲಿ ಹನುಮಂತನಿಗೆ ಬಿಟ್ಟು ಬೇರೆಯವರಿಗೆ ಸಿಗಬೇಕಿತ್ತು ಎಂದಿದ್ದಾರೆ.

ಬಳಿಕ ಮಾತನಾಡಿದ ಅವರು ಹನುಮಂತ ಗೆದ್ದಿದ್ದು ಕೂಡ ಒಂದು ರೀತಿಯಲ್ಲಿ ಖುಷಿ. ಆದರೆ ಅವರು ನಡುವಲ್ಲಿ ಬಿಗ್ ಬಾಸ್ ಮನೆಗೆ ಬಂದು ಟ್ರೋಫಿ ಗೆದ್ದರಲ್ಲ ಎಂಬುದು ಒಂದು ಬೇಜಾರು. ಮೊದಲಿಂದ ಇದ್ದವರು ಯಾರಾದರೂ ಗೆಲ್ಲಬೇಕಿತ್ತು ಇಂದು ಹೇಳಿದ್ದಾರೆ.

You may also like