Home » Harangi: ಹಾರಂಗಿ ವಸತಿ ಗೃಹಗಳ ವಿದ್ಯುತ್ ಕಡಿತಗೊಳಿಸಿದ ವಿದ್ಯುತ್‌ ಇಲಾಖೆ

Harangi: ಹಾರಂಗಿ ವಸತಿ ಗೃಹಗಳ ವಿದ್ಯುತ್ ಕಡಿತಗೊಳಿಸಿದ ವಿದ್ಯುತ್‌ ಇಲಾಖೆ

0 comments

Harangi: ಹಾರಂಗಿ ಜಲಾಶಯ ಕೊಡಗಿನ ಅತಿ ದೊಡ್ಡ ನೀರಾವರಿ ಯೋಜನೆ. ಈ ನದಿ ಮಡಿಕೇರಿ ತಾಲೂಕಿನ ಬೋರೋ ಬೆಟ್ಟದಲ್ಲಿ ಉಗಮವಾಗಿ ಕುಶಾಲನಗರ ಮುಖಾಂತರ ಸ್ವಲ್ಪ ಉತ್ತರದಲ್ಲಿ ಕೂಡಿಗೆ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಹುದುಗೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ 67 ಮೀಟರು ಎತ್ತರದ ಅಣೆಕಟ್ಟು ಕಟ್ಟಲಾಗಿದೆ. ಈ ಹಾರಂಗಿ ಇಲಾಖೆಯಲ್ಲಿ ನೂರಾರು ಮಂದಿ ನೌಕರರು ನೌಕರಿ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರದ ವತಿಯಿಂದ ವಸತಿ ಗೃಹಗಳನ್ನು ನೀಡಲಾಗಿದೆ.

ಇದೀಗ ಹಾರಂಗಿ ಇಲಾಖೆಯ ಕ್ವಾಟರ್ಸ್ ಮತ್ತು ಸೋಮವಾರಪೇಟೆ ಏತ ನೀರಾವರಿ ಯೋಜನೆಯ ಯಂತ್ರ ಘಟಕದ 6 ತಿಂಗಳ ಬಿಲ್ ಪಾವತಿಸದೇ ಇರೋ ಕಾರಣ ವಿದ್ಯುತ್ ಇಲಾಖೆ, ವಿದ್ಯುತ್ ಕಡಿತಗೊಳಿಸಿದೆ. ಮೊದಲೇ ಮಡಿಕೇರಿ ಆನೆಗಳ ಕಾಟ ಇರುವಂತ ತಾಲೂಕು. ಇನ್ನು ಹಾರಂಗಿ ಸುತ್ತಮುತ್ತ ಬಹುತೇಕ ಕಾಡು ಪ್ರದೇಶ. ಇಂತಹ ಸ್ಥಳಗಳಲ್ಲಿ ಲೈಟ್ ಇಲ್ಲದೇ ಸಿಬ್ಬಂದಿಗಳು ಇರುವುದಾದರು ಹೇಗೆ? ಮಾನ್ಯ ಶಾಸಕರಾದ ಮಂತರ್ ಗೌಡರವರು ಇದರ ಬಗ್ಗೆ ಗಮನಹರಿಸಿ ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕಾದ ಅನಿವಾರ್ಯತೆ ಇದೆ.

You may also like