Home » Hardik Pandya: ಟೆಸ್ಟ್​ ಕ್ರಿಕೆಟ್​ನಿಂದ ಹಾರ್ದಿಕ್ ನಿವೃತ್ತಿ!

Hardik Pandya: ಟೆಸ್ಟ್​ ಕ್ರಿಕೆಟ್​ನಿಂದ ಹಾರ್ದಿಕ್ ನಿವೃತ್ತಿ!

0 comments

ಬಲಗೈ ಬ್ಯಾಟಿಂಗ್ ಮತ್ತು ಬಲಗೈ ವೇಗದ ಮಧ್ಯಮ ಬೌಲಿಂಗ್ ಮಾಡುವ ಆಲ್ ರೌಂಡರ್ ಪಾಂಡ್ಯ ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿ ಆಗುತ್ತಾರಾ? ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಪಾಂಡ್ಯ ಮಹತ್ವದ ಹೇಳಿಕೆ ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರು 2016 ರ ಕೊನೆಯಲ್ಲಿ ಇಂಗ್ಲೆಂಡ್ ವಿರುದ್ಧದ ಅವರ ಸ್ವದೇಶಿ ಸರಣಿಗಾಗಿ ಭಾರತದ ಟೆಸ್ಟ್ ತಂಡದಲ್ಲಿ ಸೇರಿಸಲ್ಪಟ್ಟಿದ್ದರು. ಆದರೆ PCA ಸ್ಟೇಡಿಯಂನಲ್ಲಿ ನೆಟ್ಸ್‌ನಲ್ಲಿ ತರಬೇತಿ ಪಡೆಯುತ್ತಿರುವಾಗ ಗಾಯಗೊಂಡ ನಂತರ ಅಂತಿಮವಾಗಿ ಅವರನ್ನು ಕೈಬಿಡಲಾಯಿತು. ಹಾರ್ದಿಕ್ ಪಾಂಡ್ಯ IPL 2022 ರಿಂದ ಉತ್ತಮ ರೀತಿಯಲ್ಲಿ ಆಗಮನ ಮಾಡಿದರು. ನಾಯಕನಾಗಿ ಟಿ20 ಲೀಗ್ ಪ್ರಶಸ್ತಿ ಗೆದ್ದುಕೊಂಡರು. ಬಳಿಕ ಬಿಸಿಸಿಐ ಅವರನ್ನು ಭಾರತೀಯ ಟಿ20 ನಾಯಕನನ್ನಾಗಿ ಮಾಡಿತ್ತು.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವವನ್ನು ಅದ್ಭುತವಾಗಿ ನಡೆಸಿದ್ದು, ಪಾಂಡ್ಯ ನಾಯಕತ್ವದಲ್ಲಿ, ಭಾರತವು ಮೂರನೇ T20 ಪಂದ್ಯದಲ್ಲಿ ನ್ಯೂಜಿಲೆಂಡ್ (IND vs NZ) ಅನ್ನು 168 ರನ್‌ಗಳಿಂದ ಸೋಲಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿದೊಡ್ಡ ಗೆಲುವನ್ನು ದಾಖಲಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ನಾಯಕನಾಗಿ ಪಾಂಡ್ಯ ಇತರರಿಗೂ ಮಾದರಿಯಾಗಿದ್ದಾರೆ.

ಸದ್ಯ ಹಾರ್ದಿಕ್ ಪಾಂಡ್ಯ ತಮ್ಮ ಟೆಸ್ಟ್ ಕ್ರಿಕೆಟ್, ವೃತ್ತಿ ಜೀವನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ T20 ಸರಣಿಯ ನಂತರ, ODI ಮತ್ತು T20 ವಿಶ್ವಕಪ್ ದೃಷ್ಟಿಯಲ್ಲಿ ತನ್ನ ಸಂಪೂರ್ಣ ಗಮನ ಓವರ್‌ಗಳ ಮೇಲೆ ಇದೆ ಎಂದು ಹೇಳಿದರು. ಹಾಗೇ ಮುಂದಿನ ಟಿ20 ವಿಶ್ವಕಪ್ 2024ರಲ್ಲಿ ನಡೆಯಲಿದ್ದು, ಗಾಯವಾದ ನಂತರ ಪಾಂಡ್ಯ 2019 ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆವತ್ತಿನಿಂದಲೂ ಅವರು ಯಾವುದೇ ಟೆಸ್ಟ್ ಆಡಿಲ್ಲ. ಟೆಸ್ಟ್ ಆಡಲು ಸೂಕ್ತ ಸಮಯ ಬಂದಾಗ, ಇದುವೆ ಸರಿಯಾದ ಸಮಯ ಎಂದೆನಿಸಿದಾಗ ಹಿಂತಿರುಗುತ್ತೇನೆ. ಸಮಯ ಸರಿಯಾಗಿದ್ದು, ದೇಹ ಚೆನ್ನಾಗಿದ್ದರೆ ಖಂಡಿತಾ ಮುಂದೆ ಟೆಸ್ಟ್​ನಲ್ಲಿ ಭಾಗವಹಿಸುತ್ತೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರ ಈ ಹೇಳಿಕೆಯಿಂದ ಟೆಸ್ಟ್ ಆಡುತ್ತಾರಾ? ಅಥವಾ ನಿವೃತ್ತಿ ಪಡೆಯುತ್ತಾರಾ? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಈ ವರೆಗೆ ಹಾರ್ದಿಕ್ ಪಾಂಡ್ಯ ಅವರ ಟೆಸ್ಟ್ ದಾಖಲೆ, 11 ಪಂದ್ಯಗಳಲ್ಲಿ 31 ಸರಾಸರಿಯಲ್ಲಿ 532 ರನ್ ಗಳಿಸಿದ್ದು, ಒಂದು ಶತಕ ಮತ್ತು 4 ಅರ್ಧಶತಕಗಳನ್ನು ಗಳಿಸಿದ್ದು, 17 ವಿಕೆಟ್‌ಗಳನ್ನು ಪಡೆದಿದ್ದಾರೆ.

You may also like

Leave a Comment