Home » ಇನ್ನು ಮುಂದೆ ಎಲ್ಲಾ ವಾಹನಗಳಿಗೂ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯ | ಯಾರೆಲ್ಲಾ ನಂಬರ್ ಪ್ಲೇಟ್ ಬದಲಾಯಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಇನ್ನು ಮುಂದೆ ಎಲ್ಲಾ ವಾಹನಗಳಿಗೂ ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯ | ಯಾರೆಲ್ಲಾ ನಂಬರ್ ಪ್ಲೇಟ್ ಬದಲಾಯಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

by ಹೊಸಕನ್ನಡ
3 comments

ಬೆಂಗಳೂರು: 2019ರ ಏಪ್ರಿಲ್ 1ಕ್ಕೆ ಮುನ್ನ ತಮ್ಮ ವಾಹನಗಳನ್ನು ನೋಂದಾಯಿಸಿರುವ ಬೈಕ್, ಕಾರು ಮತ್ತು ಇತರ ವಾಹನಗಳ ಮಾಲೀಕರು ತಮ್ಮ ಹಳೆಯ ನೋಂದಣಿ ಫಲಕಗಳನ್ನು ಬದಲಾಯಿಸಬೇಕಾಗಿದೆ.

ಹೌದು, ಕರ್ನಾಟಕ ಸಾರಿಗೆ ಇಲಾಖೆಯು ಉನ್ನತ ಭದ್ರತಾ ನೋಂದಣಿ ಫಲಕಗಳನ್ನು (ಎಚ್ಎಸ್ಆರ್ ಪಿ) ಕಡ್ಡಾಯಗೊಳಿಸುವ ಪ್ರಕ್ರಿಯೆಯಲ್ಲಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯು ನಂಬರ್ ಪ್ಲೇಟ್ ತಯಾರು ಮಾಡುವುದಕ್ಕೆ ಸಂಬಂಧಪಟ್ಟಂತೆ ಏಜೆನ್ಸಿಯನ್ನು ಆಯ್ಕೆ ಮಾಡಲು ಟೆಂಡರ್ ಕರೆಯಲಿದೆ ಎಂದು ತಿಳಿದುಬಂದಿದೆ.

ಎಚ್ಎಸ್ಆರ್ ಪಿಗಳನ್ನು ಅಂಟಿಸುವ ವ್ಯವಸ್ಥೆ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಈಗಾಗಲೇ ಜಾರಿಯಲ್ಲಿದೆ. ಕರ್ನಾಟಕದಲ್ಲಿ, ಏಪ್ರಿಲ್ 1, 2019 ರ ನಂತರ ನೋಂದಾಯಿಸಲಾದ ವಾಹನಗಳು ಎಚ್ಎಸ್ಆರ್ ಪಿ ಯನ್ನು ಹೊಂದಿದೆ.

ಈ ಹಿಂದೆಯೂ ರಾಜ್ಯ ಸರ್ಕಾರ 2010-11ರಲ್ಲಿ ಈ ನೀತಿಯನ್ನು ಜಾರಿಗೆ ತರಲು ಪ್ರಯತ್ನಿಸಿತ್ತು. ಆಗ ಟೆಂಡರ್ ಪ್ರಕ್ರಿಯೆಯು ವಿವಾದಗಳಲ್ಲಿ ಮುಳುಗಿದ್ದರಿಂದ, ಸರ್ಕಾರವು 2013 ರಲ್ಲಿ ತೇಲಿಬಿಟ್ಟ ಟೆಂಡರ್ ಅನ್ನು ರದ್ದುಗೊಳಿಸಿತ್ತು. ಈಗ ಮತ್ತೆ, ಹೊಸ ಟೆಂಡರ್ ಗಳನ್ನು ಆಹ್ವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಾಗಾಗಿ ಏಪ್ರಿಲ್ 1, 2019 ರ ಮೊದಲು ವಾಹನ ಖರೀದಿ ಮಾಡಿದವರು ತಮ್ಮ ಹಳೆಯ ನೋಂದಣಿ ಫಲಕಗಳನ್ನು ಬದಲಾಯಿಸಬೇಕಾಗಿದೆ.

You may also like

Leave a Comment