Home » Prajwal Revanna: ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ನೋಡಿದ್ದಾರಾ ತಮ್ಮ ನಿಖಿಲ್ ಕುಮಾರಸ್ವಾಮಿ ?, ನಿಖಿಲ್’ರಿಂದ ಅಚ್ಚರಿ ಹೇಳಿಕೆ !

Prajwal Revanna: ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ನೋಡಿದ್ದಾರಾ ತಮ್ಮ ನಿಖಿಲ್ ಕುಮಾರಸ್ವಾಮಿ ?, ನಿಖಿಲ್’ರಿಂದ ಅಚ್ಚರಿ ಹೇಳಿಕೆ !

by ಹೊಸಕನ್ನಡ
0 comments
Prajwal Revanna

Prajwal Revanna: ಹಾಸನದ ಹಾಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣರವರು ನೂರಾರು ಮಹಿಳೆಯರ ಜೊತೆ ರಾಸಲೀಲೆ ವಿಡಿಯೋ ಪ್ರಕರಣ ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸಿದ್ದು ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಆತನ ತಮ್ಮ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ಹೇಳಿಕೆ ನೀಡಿದ್ದಾರೆ. ಅಣ್ಣ ಪ್ರಜ್ವಲ್ ನ ರಾಸಲೀಲೆಯ ಸೆಕ್ಸ್ ವೀಡಿಯೊ ನೋಡುವ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತಾಡಿದ್ದಾರೆ.

ತಮ್ಮ ಸಹೋದರ ಪ್ರಜ್ವಲ್ ನ ರಾಸಲೀಲೆ ಪ್ರಕರಣದ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಕೂಡಾ ಆಗಿರುವ ನಿಖಿಲ್ ಕುಮಾರಸ್ವಾಮಿ, ‘ಈ ಬಗ್ಗೆ ನನಗೂ ನೋವಾಗಿದೆ. ಈತನ ಕಾಯಿ ವಿಡಿಯೋಗಳನ್ನು ನೋಡಲು ನಾನು ಧೈರ್ಯ ಮಾಡಿಲ್ಲ. ಹಾಗಾಗಿ ಈ ವಿಡಿಯೋವನ್ನು ನೋಡುವುದಕ್ಕೆ ಆಗಲಿಲ್ಲ. ಆದರೆ ನನ್ನ ಆಪ್ತ ವರ್ಗದವರು ಹೇಳಿರುವ ಪ್ರಕಾರ ಅಲ್ಲಿರುವ ‘ ರಾ ‘ ವಿಡಿಯೋಗಳನ್ನು ಕನಿಷ್ಠ ಪಕ್ಷ ಬ್ಲರ್ ಕೂಡ ಮಾಡಿಲ್ಲ. ಆದರೆ ಪಾಪ, ಆ ಹೆಣ್ಣು ಮಕ್ಕಳನ್ನ ಓಪನ್ ಆಗಿ ತೋರಿಸಿದ್ದಾರೆ. ಇದು ನಿಜಕ್ಕೂ ತುಂಬಾನೇ ಬೇಜಾರಾಗುತ್ತೆ. ಇದರ ಬಗ್ಗೆ ಕೂಡಾ ತನಿಖೆ ಆಗಬೇಕು’ ಎಂದರು ನಿಖಿಲ್.

‘ಈಗ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಿದೆ. ತನಿಖೆ ನಡೆಯುತ್ತಿದೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಅದು ಒಂದು ಪ್ರಕ್ರಿಯೆ ಆಗಿದ್ದು ಅದರ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗಲ್ಲ’ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಹಾಸನದ ಈ ವಿಚಾರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಹೆಚ್ಚಿಗೆ ಹಾಸನಕ್ಕೆ ಕಾಲೇ ಇಟ್ಟಿಲ್ಲ. ಒಮ್ಮೊಮ್ಮೆಹೋದರೆ ಹಾಸನಾಂಬೆ ಉತ್ಸವಕ್ಕೆ ಮಾತ್ರ ಹೋಗುತ್ತೇನೆ. ಅಲ್ಲದೆ ಹಾಸನ ಸಂಸದರಿಗೂ ನನಗೂ ಸಂಪರ್ಕ ಕೂಡಾ ಇರಲಿಲ್ಲ” ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿ ತಮ್ಮ ಅಪ್ಪ ಕುಮಾರಸ್ವಾಮಿಯಂತೆ ತಾವು ಕೂಡ ಪ್ರಕರಣದಿಂದ ಜಾರಿಕೊಳ್ಳುವ ಮತ್ತು ಅಂತರ ಕಾಪಾಡಿಕೊಳ್ಳುವ ಮಾತಾಡಿದ್ದಾರೆ.

ಇದನ್ನೂ ಓದಿ: Mangaluru: ಮಾರಣಾಂತಿಕ ಕಾಯಿಲೆಯ ಮಗುವಿಗೆ ಸಹಾಯ ಕೇಳಿದ ಅಪ್ಪ ಅಮ್ಮ ;ಇನ್ನು ಹಣ ಹಾಕಬೇಡಿ ಪ್ಲೀಸ್’ ಅನ್ನುವಷ್ಟರ ಮಟ್ಟಿಗೆ ಹರಿದು ಬಂದ ಹಣ !

ಮತ್ತಷ್ಟು ಮಾತನಾಡಿದ ಅವರು, ‘ಈ ಪ್ರಕರಣ ರಾಜ್ಯದ ಜನತೆಗೆ ತಪ್ಪು ಸಂದೇಶ ಕೊಡುತ್ತಿದೆ. ವಿಶೇಷವಾಗಿ ದೇವೇಗೌಡರ ಮೇಲೆ ಈ ಪ್ರಕರಣ ಕೆಟ್ಟ ಪರಿಣಾಮ ಬೀರಿದೆ ದೇವೇಗೌಡರದು ಬಿಡಿಸಿಟ್ಟ ಪುಸ್ತಕದಂತಹ ಬದುಕು. ಅವರ ಜೀವನ ತೆರೆದ ಪುಸ್ತಕ. ಅಲ್ಲದೇ ಅಜ್ಜಿ ಚೆನ್ನಮ್ಮ ಮತ್ತು ಗೌಡರು ಯಾವ ರೀತಿ ಬದುಕಿದರು ಅಂತ ಎಲ್ಲರಿಗೂ ಗೊತ್ತಿದೆ. ಅದು ನಮಗೆ ದೊಡ್ಡ ಸ್ಪೂರ್ತಿ. ಯಾವ ರೀತಿ ದಂಪತಿ ಬಾಳಿ ಬದುಕಬೇಕು ಅಂತ ಅವರು ತೋರಿಸಿಕೊಟ್ಟಿದ್ದಾರೆ. ಬಹುಶಃ ಈ ವಿಚಾರದ ಕಾರಣದಿಂದ ಅವರು ಸಾಕಷ್ಟು ನೊಂದಿದ್ದಾರೆ. ಇದು ದೇವೇಗೌಡರ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಗೊತ್ತಾಗುತ್ತಿಲ್ಲ. ಒಟ್ಟಾರೆ ದೇವೇಗೌಡರು ದುಃಖದಲ್ಲಿದ್ದಾರೆ. ಅಲ್ಲದೇ ನಮ್ಮ ಅಜ್ಜಿ ಸಹ ಬಹಳ ನೋವಿನಲ್ಲಿದ್ದಾರೆ ಎಂದು ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

You may also like

Leave a Comment