Home » Agriculture: ಕಸದ ರಾಶಿಗೆ ಎಲೆಕೋಸು ಸುರಿದ ಹಾಸನ ರೈತ – ಮಧ್ಯವರ್ತಿಯಿಂದ 30 ಸಾವಿರ ಪರಿಹಾರ!

Agriculture: ಕಸದ ರಾಶಿಗೆ ಎಲೆಕೋಸು ಸುರಿದ ಹಾಸನ ರೈತ – ಮಧ್ಯವರ್ತಿಯಿಂದ 30 ಸಾವಿರ ಪರಿಹಾರ!

0 comments

Agriculture: ಮಧ್ಯವರ್ತಿ ನಂಬಿ ಮಾರಾಟವಾಗದ 14 ಟನ್ ಎಲೆಕೋಸನ್ನು ರಸ್ತೆ ಬದಿಯಲ್ಲಿ ಸುರಿದ ಹಾಸನದ ನಾಗನಹಳ್ಳಿ ರೈತ ರಂಗನಾಥ್ ಅವರಿಗೆ ನಷ್ಟ ಪರಿಹಾರ ಕೊಡಿಸುವ ಮೂಲಕ ಎಂಪಿಎಂಸಿ ನೆರವಾಗಿದೆ.

ಮೈಸೂರಿನ ಬಂಡಿಪಾಳ್ಯ ಎಪಿಎಂಸಿ ಸಗಟು ಮಾರುಕಟ್ಟೆಯ ಮಧ್ಯವರ್ತಿ ಚಂದ್ರಪ್ಪ ಮಾತು ನಂಬಿ, ಲಾರಿ ತುಂಬಾ ಎಲೆಕೋಸು ತಂದಿದ್ದ ರಂಗನಾಥ್, ಕಡೆಗೆ 2 ದಿನ ಕಾದು, ರಸ್ತೆ ಬದಿಯಲ್ಲಿ ಕೋಸು ಸುರಿದಿದ್ದರು. ಈ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು. ಕೂಡಲೇ ಎಚ್ಚೆತ್ತ ಎಂಪಿಎಂಸಿ ಆಡಳಿತ, ಮಧ್ಯವರ್ತಿಗೆ ನೋಟಿಸ್‌ ನೀಡಿ, ರೈತ ರಂಗನಾಥ್‌ಗೆ ಮಧ್ಯವರ್ತಿ ಚಂದ್ರಪ್ಪನಿಂದ 30 ಸಾವಿರ ರೂ. ಪರಿಹಾರ ಹಣ

ಕೊಡಿಸುವ ಮೂಲಕ ರೈತನಿಗಾದ ನಷ್ಟಕ್ಕೆ ನೆರವಾಗಿದೆ.

ಪತ್ರಿಕೆಯಲ್ಲಿ ವರದಿ ಪ್ರಕಟವಾದ ಕೂಡಲೇ ಮಧ್ಯವರ್ತಿಗೆ ನೋಟಿಸ್‌ ನೀಡಿದ್ದು, ಮುಂದೆಂದೂ ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಮಧ್ಯವರ್ತಿ ಚಂದ್ರಪ್ಪ ಹಾಗೂ ರೈತ ರಂಗನಾಥ್ ಅವರ ಸಮಕ್ಷಮದಲ್ಲಿ ಇಬ್ಬರ ಒಪ್ಪಿಗೆಯ ಮೇರೆಗೆ ಪರಿಹಾರ ಹಣ ಕೊಡಿಸಲಾಗಿದೆ ಎಂದು ಎಪಿ ಎಂಸಿ ಸೂಪ‌ರ್ ವೈಸರ್ ನಾಗರಾಜು ತಿಳಿಸಿದರು.

ಮನವಿ: ಭಾರತೀಯ ಕಿಸಾನ್ ಸಂಘದ ವತಿಯಿಂದ ನಷ್ಟಕ್ಕೊಳಗಾದ ರೈತ ರಂಗ ನಾಥ್‌ಗೆ ಪರಿಹಾರ ನೀಡಬೇಕು ಹಾಗೂ ಮಧ್ಯವರ್ತಿ ಚಂದ್ರಪ್ಪ ಅವರ ಲೈಸೆನ್ಸ್ ರದ್ದು ಮಾಡಬೇಕು ಎಂದು ಎಪಿಎಂಸಿ ಸಹ ಕಾರ್ಯದರ್ಶಿ ರೂಪ ಅವರಿಗೆ ಮನವಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ: Puttur: ಪುತ್ತೂರು: ಆತ್ಮಹತ್ಯೆಗೆ ಶರಣಾದ ಪಶು ವೈದ್ಯೆ!

You may also like