Home » BPL Card : ಆರು ತಿಂಗಳಿಂದ ನೀವು ರೇಷನ್ ಪಡೆದಿಲ್ಲವೇ? ಹಾಗಿದ್ದರೆ ರದ್ದಾಗುತ್ತೆ ನಿಮ್ಮ BPL ಕಾರ್ಡ್

BPL Card : ಆರು ತಿಂಗಳಿಂದ ನೀವು ರೇಷನ್ ಪಡೆದಿಲ್ಲವೇ? ಹಾಗಿದ್ದರೆ ರದ್ದಾಗುತ್ತೆ ನಿಮ್ಮ BPL ಕಾರ್ಡ್

0 comments

BPL Card: ಇಂದು ರೇಷನ್ ಕಾರ್ಡ್ ಬಹು ಮುಖ್ಯ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರದ ಯೋಜನೆಗಳಿಂದ ಹಿಡಿದು ಇತರ ಕಚೇರಿ ಕೆಲಸಗಳಲ್ಲಿಯೂ ಇದು ಮಹತ್ವದ ಪಾತ್ರವಹಿಸುತ್ತದೆ. ಒಟ್ಟಿನಲ್ಲಿ ಒಂದು ಕುಟುಂಬದ ಅಗತ್ಯತೆಗಳನ್ನು ಪೂರೈಸಲು ಇದು ಬೇಕೇ ಬೇಕು. ಅದರಲ್ಲೂ ಬಿಪಿಎಲ್ ಕಾರ್ಡ್ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಇದೀಗ ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಶಾಕ್ ನೀಡಿದ್ದು, ಈ ಕೆಲಸ ಮಾಡದಿದ್ದರೆ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲು ಸೂಚನೆ ನೀಡಿದೆ.

ಇದನ್ನೂ ಓದಿ:BPL Card: ಬಿಪಿಎಲ್‌ ಕಾರ್ಡ್‌ದಾರರಿಗೆ ಸರಕಾರದಿಂದ ದಸರಾ ಶಾಕ್‌

ಹೌದು, 6 ತಿಂಗಳಿನಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ರದ್ದು ಮಾಡುತ್ತಿದ್ದು., ಯಾರು ಪಡಿತರವನ್ನು ಪಡೆದುಕೊಳ್ಳುತ್ತಿಲ್ಲವೋ ಅಂಥವರ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಸಮೀಕ್ಷೆ ಕಾರ್ಯ ಆರಂಭವಾಗಿದೆ. ಸರ್ಕಾರದ ಇತರ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಮಾತ್ರ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂತಹ ಪಡಿತರ ಚೀಟಿಯ ಸಮೀಕ್ಷೆ ನಡೆಸಲು ಆಹಾರ ಇಲಾಖೆ ಮುಂದಾಗಿದೆ.

You may also like