Viral Video: ವ್ಯಕ್ತಿಯೊಬ್ಬನು ತನ್ನ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಮನಸಾರೆ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಸ್ನೇಹಿತನ ಅಂತಿಮ ಯಾತ್ರೆಯಲ್ಲಿ ಡ್ಯಾನ್ಸ್ ಮಾಡಿ ತನ್ನ ಸ್ನೇಹಿತನಿಗೆ ಈ ವ್ಯಕ್ತಿಯು ಸಂತೋಷದ ವಿದಾಯ ಹೇಳಿದ್ದಾನೆ. ಮಧ್ಯ ಪ್ರದೇಶದ ಭೋಪಾಲ್’ನ ಮಂದೌರ್ ಜಿಲ್ಲೆಯ ಜವೇಶಿಯಾ ಗ್ರಾಮದ ನಿವಾಸಿ ಅಂಬಾಲಾಲ್ ಪ್ರಜಾಪತಿ ಎಂಬವರ ಈ ಸಾವಿನ ಮನೆಯ ‘ಸಂತೋಷ’ದ ನೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ತಾನು ಸತ್ತ ಬಳಿಕ ಸ್ನೇಹಿತ ತನ್ನ ಅಂತಿಮ ಯಾತ್ರೆಯಲ್ಲಿ ಕುಣಿದು ತನಗೆ ಅಂತಿಮ ವಿದಾಯ ಹೇಳಬೇಕೆನ್ನುವುದು ಸೋಹನ್ಹಾಲ್ ಜೈನ್ ಎಂಬವರ ಕೊನೆಯ ಆಸೆಯಾಗಿತ್ತು. ಈ ಸಂಬಂಧ ಅವರು ತನ್ನ ಜೀವದ ಸ್ನೇಹಿತನಿಗೆ ಪತ್ರ ಬರೆದು ವಿನಂತಿ ಮಾಡಿದ್ದರು. “ಅಂಬಾಲಾಲ್ ಮತ್ತು ಶಂಕರ್‌ಲಾಲ್ ನನ್ನ ಶವದ ಮುಂದೆ ಒಟ್ಟಿಗೆ ನೃತ್ಯ ಮಾಡಬೇಕು. ನಾನು ಎಂದಾದರೂ ತಿಳಿದೋ ತಿಳಿಯದೆಯೋ ತಪ್ಪು ಮಾಡಿದ್ದರೆ, ದಯವಿಟ್ಟು ನನ್ನನ್ನು ಕ್ಷಮಿಸಿ” ಜೈನ್ ಪತ್ರದಲ್ಲಿ ಬರೆದಿದ್ದರು.
“ಆತನ ಕೊನೆಯ ಯಾತ್ರೆಯಲ್ಲಿ ನಾನು ನೃತ್ಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದೆ, ಈಗ ಅದನ್ನು ನಾನು ಮಾಡಿದ್ದೇನೆ. ಅವನು ನನಗೆ ಸ್ನೇಹಿತನಿಗಿಂತ ಹೆಚ್ಚು, ಅವನು ಬದುಕಿದ್ದಾಗ ನನ್ನ ನೆರಳಿನಂತಿದ್ದ” ಎಂದು ಅಂಬಾಲಾಲ್ ಹೇಳಿದ್ದಾರೆ.
ಮೃತರಾಗಿರುವ ಜೈನ್ ಕಳೆದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಿ ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಈ ವಿದಾಯದ ಡ್ಯಾನ್ಸ್ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
https://twitter.com/i/status/1950809792559157498
