Kodi Shri: ರಾಜಕೀಯ ವಿಚಾರ, ನೈಸರ್ಗಿಕ ವಿಚಾರ ಹಾಗೂ ಸಾವು ನೋವು, ಮಳೆ ಮತ್ತು ಪ್ರಕೃತಿ ವಿಕೋಪಗಳ ಆದಿಯಾಗಿ ಅನೇಕ ಸಂಗತಿಗಳ ಕುರಿತು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿಯುತ್ತಾರೆ. ಅವರ ಎಲ್ಲ ಭವಿಷ್ಯಗಳು ಕೂಡ ನಿಜವಾಗಿವೆ. ಅದರಲ್ಲೂ ರಾಜಕೀಯವಾಗಿ ಅವರು ನೀಡುವ ಅಚ್ಚರಿ ಭವಿಷ್ಯಗಳು ಸತ್ಯವಾಗಿದೆ. ಇದೀಗ ಶ್ರೀಗಳು ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದರ ಕುರಿತು ಭವಿಷ್ಯ ನುಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಭಾರಿ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿ ರೇಸ್‌ನಲ್ಲಿ ಡಿಕೆ ಶಿವಕುಮಾರ್, ಜಿ.ಪರಮೇಶ್ವರ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಕಣದಲ್ಲಿದ್ದಾರೆ. ಈ ಪೈಕಿ ಇದೇ ನಾಯಕನಿಗೆ ಮುಖ್ಯಮಂತ್ರಿ ಪಟ್ಟ ಎಂದು ಕೋಡಿಶ್ರೀ ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ಇವರೆಂದು ಕೋಡಿ ಶ್ರೀ ಹೇಳಿದ್ದು ಯಾರಿಗೆ?
Udupi: “ಸಿದ್ದರಾಮಯ್ಯನ ಕೊಂದರೆ ಹಿಂದೂಗಳಿಗೆ ನೆಮ್ಮದಿ”: ಪೋಸ್ಟ್ ಹಾಕಿದ್ದ ಹೋಂ ಗಾರ್ಡ್ ಅರೆಸ್ಟ್!
ಕಾರ್ಯಕ್ರಮವೊಂದರ ವೇದಿಕೆಯಲ್ಲೇ ಮುಂದಿನ ಸಿಎಂ ಯಾರು ಎಂದು ಕೋಡಿಶ್ರೀ ಅವರು ಹೆಸರು ಸಹ ಹೇಳಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದೆ. ಈ ವೇಳೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರಸ್ತಾಪವಾಯಿತು. ಈ ವೇಳೆ ಉತ್ತರ ಕರ್ನಾಟಕದಿಂದ ಯಾರಿಗೆ ಮುಖ್ಯಮಂತ್ರಿ ಸ್ಥಾನ ಎಂದು ಕೇಳಿದಾಗ ಸಚಿವ ಎಂ.ಬಿ.ಪಾಟೀಲ್ ಅವರ ಹೆಸರು ಬಂತು. ಎಂಬಿ ಪಾಟೀಲ್ ಅವರು ತುಂಬಾ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಇದೆ ಎಂದು ಕೋಡಿಶ್ರೀಗಳು ಹೇಳಿದ್ದಾರೆ.
