Home » ತಲೆನೋವಿಗೆ ಪರಿಹಾರಕ್ಕಾಗಿ ದೇವ ಪಾತ್ರಿಯ ಮೊರೆಹೋದ ಮಹಿಳೆ | ನೋವು ಶಮನ ಮಾಡುತ್ತೇನೆಂದು ಬೆತ್ತದಿಂದ ಹೊಡೆದ ಪಾತ್ರಿ,ಮಹಿಳೆ ಸಾವು

ತಲೆನೋವಿಗೆ ಪರಿಹಾರಕ್ಕಾಗಿ ದೇವ ಪಾತ್ರಿಯ ಮೊರೆಹೋದ ಮಹಿಳೆ | ನೋವು ಶಮನ ಮಾಡುತ್ತೇನೆಂದು ಬೆತ್ತದಿಂದ ಹೊಡೆದ ಪಾತ್ರಿ,ಮಹಿಳೆ ಸಾವು

by Praveen Chennavara
0 comments

ಹಾಸನ : ಪೂಜೆಯ ನೆಪದಲ್ಲಿ ಅನಾರೋಗ್ಯ ಪೀಡಿತ ಮಹಿಳೆಯ ತಲೆಗೆ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಪಾರ್ವತಿ (47) ಎಂದು ಗುರುತಿಸಲಾಗಿದೆ. ಪಾರ್ವತಿ ಎಂಬವರು ತಲೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಹೋಗಿಯೂ ಗುಣಮುಖರಾಗದ ಹಿನ್ನೆಲೆ ಗ್ರಾಮದ ಪಿರಿಯಾಪಟ್ಟಣದ ದೇವರ ಪೂಜೆ ಮಾಡುವ ಮಧು ಎಂಬವರ ಬಳಿ ಕರೆದುಕೊಂಡು ಹೋಗಿದ್ದು, ತಲೆ ನೋವನ್ನು ಬೆತ್ತದಿಂದ ಸರಿಪಡಿಸುವುದಾಗಿ ಹೇಳಿದ ಪೂಜಾರಿ ಮಹಿಳೆಗೆ ಬೆತ್ತದಿಂದ ಹೊಡೆದಿದ್ದು, ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಪಾರ್ವತಿಯವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಈ ಕುರಿತು ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಗೆ ಹೊಡೆದ ಒಂದೇ ಏಟಿಗೆ ಪಾರ್ವತಿಯವರು ತೀವ್ರ ಅಸ್ವಸ್ಥಗೊಂಡಿದ್ದು, ಈ ವೇಳೆ ನಿಂಬೆ ರಸ ಕುಡಿಸಿ ಖಾಯಿಲೆ ಗುಣವಾಗಿದೆ ಎಂದು ಹೇಳಿ ಕುಟುಂಬಸ್ಥರನ್ನು ಪೂಜಾರಿ ಕಳುಹಿಸಿದ್ದಾನೆ ಎಂದು ತಿಳಿದು ಬಂದಿದೆ.

You may also like

Leave a Comment