ಭಾರತೀಯ ಅಡುಗೆ ಪದ್ದತಿಯಲ್ಲಿ ಕರಿಬೇವಿನ ಎಲೆಗಳ ಪಾತ್ರ ಮಹತ್ವವಾದದ್ದು. ಕರಿಬೇವಿನ ಎಲೆಗಳನ್ನು ಸಾಂಬಾರ್, ಪಲ್ಯ ಮಾಡುವಾಗ ಬಳಸುತ್ತಾರೆ. ಒಗ್ಗರಣೆಗೆ ಕರಿಬೇವಿನ ಎಲೆ ಬೇಕೇ ಬೇಕು. ಇದನ್ನು ಬಳಸುವುದರಿಂದ ಸಾಂಬಾರು ಪದಾರ್ಥಗಳು ಘಮ ಘಮವೆಂದು ಸುವಾಸನೆ ಬೀರುತ್ತವೆ. ಆದರೆ ನಿಮಗಿದು ತಿಳಿದಿದೆಯೇ? ಕರಿಬೇವು ಆಹಾರ ಪದಾರ್ಥಗಳಿಗೆ ಒಳ್ಳೆಯ ಸುವಾಸನೆ ಬೀರುವುದಲ್ಲದೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು!!
ಹೌದು, ಕರಿಬೇವಿನಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಕರಿಬೇವಿನ ಎಲೆಗಳಲ್ಲಿ ಕಾರ್ಬೋಹೈಡ್ರೆಟ್‌ಗಳು, ಫೈಬರ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಮತ್ತು ವಿಟಮಿನ್‌ಗಳಲ್ಲಿ ಸಮೃದ್ಧವಾಗಿರುವ ಕಾರಣ ನಿಮ್ಮ ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಮಧುಮೇಹ:- ದೇಹದ ಇನ್ಸುಲಿನ್ ಚಟುವಟಿಕೆಯ ಮೇಲೆ ಪ್ರಭಾವ ಬೀರುವ ಮೂಲಕ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಮೂಲಕ, ಕರಿಬೇವು ರಕ್ತದಲ್ಲಿನ ಸಕ್ಕರೆಯ ಮಟ್ಟಕ್ಕೆ ಪ್ರಯೋಜನವನ್ನು ನೀಡುತ್ತದೆ.
ಕೊಲೆಸ್ಟ್ರಾಲ್:- ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಕರಿಬೇವಿನ ಎಲೆಗಳು, ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುವ ಕೊಲೆಸ್ಟ್ರಾಲ್‌ನ ಆಕ್ಸಿಡೀಕರಣವನ್ನು ನಿಲ್ಲಿಸುತ್ತದೆ. ಕರಿಬೇವು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಹೊಟ್ಟೆಯ ತೊಂದರೆ:- ಕರಿಬೇವಿನ ಎಲೆ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ಇದು ಹೊಟ್ಟೆಯ ಅಸ್ವಸ್ಥತೆಯನ್ನು ಗುಣಪಡಿಸಲು ಸಹ ಬಳಸಲಾಗುತ್ತದೆ. ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
ಕೂದಲಿನ ಸಮಸ್ಯೆ:- ತಲೆಹೊಟ್ಟು ಗುಣಪಡಿಸಲು ಮತ್ತು ಹಾನಿಗೊಳಗಾದ ಕೂದಲನ್ನು ಗುಣಪಡಿಸಲು ಅದ್ಭುತವಾಗಿ ಕೆಲಸ ಮಾಡುತ್ತದೆ. ಕೂದಲು ಬಿಳಿಯಾಗುವುದನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ದುರ್ಬಲ ಕೂದಲಿನ ಸಾಫ್ಟ್ ಅನ್ನು ಬಲಪಡಿಸುತ್ತದೆ ಮತ್ತು ಕೂದಲು ಉದುರದಂತೆ ತಡೆಯುತ್ತದೆ.
ತೂಕ ಇಳಿಕೆ:- ಜೀರ್ಣಕ್ರಿಯೆಯನ್ನು ಇದು ಹೆಚ್ಚಿಸುವುದರಿಂದ ದೇಹವು ಕೊಬ್ಬನ್ನು ಹೀರಿಕೊಳ್ಳುವುದನ್ನು ತಪ್ಪಿಸುತ್ತದೆ. ಈ ಮೂಲಕ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಬೆಳಗಿನ ಬೇನೆ:- ಕರಿಬೇವಿನ ಎಲೆ ಗರ್ಭಿಣಿಯರಿಗೆ ತಮ್ಮ ಮೊದಲ ತ್ರೈಮಾಸಿಕದಲ್ಲಿ ಬೆಳಗಿನ ಬೇನೆ ಮತ್ತು ವಾಂತಿಯನ್ನು ತಡೆಯಲು ಮನೆಯಲ್ಲಿ ತಯಾರಿಸಿದ ಚಿಕಿತ್ಸೆಯಾಗಿ ಬಳಸಬಹುದು.
ಇದಲ್ಲದೇ ಕರಿಬೇವಿನ ಎಲೆಗಳು ಉರಿಯೂತ ನಿವಾರಕ, ಬ್ಯಾಕ್ಟಿರಿಯಾ ವಿರೋಧಿ ಮತ್ತು ಭೇದಿಯನ್ನು ತಡೆಗಟ್ಟುವುದರ ಜೊತೆಗೆ ಹಲವಾರು ಜೀರ್ಣಕಾರಿ ಪರಿಣಾಮಗಳನ್ನು ಹೊಂದಿವೆ.
