Home » Bengaluru: ಕಳಪೆ ಗುಣಮಟ್ಟದ ಔಷಧಗಳ ವಿರುದ್ಧ ಸಮರ ಸಾರಲು ಮುಂದಾದ ಆರೋಗ್ಯ ಇಲಾಖೆ!

Bengaluru: ಕಳಪೆ ಗುಣಮಟ್ಟದ ಔಷಧಗಳ ವಿರುದ್ಧ ಸಮರ ಸಾರಲು ಮುಂದಾದ ಆರೋಗ್ಯ ಇಲಾಖೆ!

by ಕಾವ್ಯ ವಾಣಿ
0 comments

Bengaluru: ಕಳೆದ ಕೆಲ ದಿನಗಳ ಹಿಂದೆಯಷ್ಟೇ ರಾಜ್ಯ ಸರ್ಕಾರಿ ಪ್ರಯೋಗಾಲಯದ ಪರೀಕ್ಷೆಯಲ್ಲಿ ಅಸುರಕ್ಷಿತ ಎಂದು ಸಾಬೀತಾದ ಹಾಗೂ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿರುವ ವಿವಿಧ ಕಂಪೆನಿಗಳ 9 ಔಷಧಗಳ ಮಾರಾಟವನ್ನು ದೇಶಾದ್ಯಂತ ನಿರ್ಬಂಧಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾಗೆ ಪತ್ರ ಬರೆದ ಬೆನ್ನಲ್ಲೇ ಆರೋಗ್ಯ ಇಲಾಖೆಯ ಕಳಪೆ ಗುಣಮಟ್ಟದ ಈ 9 ಔಷಧಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

ನಿಷೇಧಿತ ಇಂಜೆಕ್ಷನ್ಗಳು:

ಫಾರ್ಮಾ ಇಂಪೆಕ್ಸ್‌ ಕಂಪನಿಯ ಮೆಟ್ರೊನಿಡಜೋಲ್‌ ಇಂಜೆಕ್ಷನ್‌

 

ಐಪಿ-100 ಎಂಎಲ್, ಎಲ್ಪಾ ಲ್ಯಾಬೊರೇಟರಿಸ್‌ನ ಡೈಕ್ಲೋಫೆನ್ಯಾಕ್ ಸೋಡಿಯಂ ಇಂಜೆಕ್ಷನ್

 

ಐಪಿ, ರುಸೊಮಾ ಲ್ಯಾಬೊರೇಟರಿಸ್‌ನ ಡೆಕ್ಸ್‌ ರೋಸ್ 25% ಡಬ್ಲ್ಯೂ/ವಿ ಡಿ25 ಇಂಜೆಕ್ಷನ್

 

ಐ.ಪಿ. ಐಎಚ್‌ಎಲ್ ಲೈಫ್‌ಸೈನ್ಸಸ್‌ನ ಮೆಟ್ರೊನಿಡಜೋಲ್ ಇಂಜೆಕ್ಷನ್

 

ಐಪಿ 100 ಎಂಎಲ್, ಪಾಕ್ಸನ್ಸ್ ಫಾರ್ಮಾಸಿಟಿಕಲ್ಸ್‌ನ ಫುಸ್ಟೆಡ್ ಇಂಜೆಕ್ಷನ್ ಪ್ಯೂಕ್ಸ್‌ 10ಎಂಜಿ

 

ಮಾಡರ್ನ್ ಲ್ಯಾಬೊರೇಟರಿಸ್‌ನ ಪೈಪರಾಸಿಲಿನ್ ಮತ್ತು ಟಾಜೊಬ್ಯಾಕ್ಟಮ್, ರಿಗೈನ್ ಲ್ಯಾಬೊರೇಟರಿಸ್‌ನ ಕ್ಯಾಲ್ಸಿಯಂ ಗ್ಲುಕೊನೇಟ್ ಇಂಜೆಕ್ಷನ್‌

ಒಂಡನ್ಸೆಟ್ರೋನ್ ಇಂಜೆಕ್ಷನ್

ಮಾರ್ಟಿನ್ ಮತ್ತು ಬ್ರೌನ್ ಬಯೋ ಸೈನ್ಸ್‌ನ ಅಟ್ರೋಪೈನ್ ಸಸ್ಪೀಟ್ ಇಂಜೆಕ್ಷನ್ ಐಪಿ1 ಎಂ ಎಲ್

ಇದೀಗ ಆರೋಗ್ಯ ಇಲಾಖೆಯು ಕಳಪೆ ಗುಣಮಟ್ಟದ ಔಷಧಿಗಳ ವಿರುದ್ಧ ಸಮರ ಸಾರಲು ಮುಂದಾಗಿದ್ದು ರಾಜ್ಯಕ್ಕೆ ಬರುವ ಎಲ್ಲಾ ಔಷಧಗಳ ಗುಣಮಟ್ಟವನ್ನು ಪರೀಕ್ಷೆ ಮಾಡಲಿದೆ. ಎಲ್ಲಾ ಬಗೆಯ ಬ್ಯಾಚ್‌ಗಳ ಮಾತ್ರೆ, ಇಂಜೆಕ್ಷನ್‌, ಸಿರಪ್, ಫ್ಲೋಯಿಡ್‌ಗಳನ್ನು ಕೇಂದ್ರದ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಲಾಗಿದ್ದರೂ ರಾಜ್ಯದ ಸರ್ಕಾರಿ ಪ್ರಯೋಗಾಲಯದ ಪರೀಕ್ಷೆ ಮಾಡಿಸಲಾಗುವುದು. ಈ ಪರೀಕ್ಷೆಯಲ್ಲಿ ಔಷಧ ಅಸುರಕ್ಷಿತ ಎಂದು ಸಾಬೀತಾದರೆ ಹಾಗೂ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ ಇತಂಹ ಕಳಪೆ ಗುಣಮಟ್ಟದ ಔಷಧಿಗಳ ಕಂಪನಿಗಳನ್ನು ಶಾಶ್ವತವಾಗಿ ಕಪ್ಪು ಪಟ್ಟಿ ಸೇರಿಸಲು ಇಲಾಖೆ ನಿರ್ಧಾರ ಕೈಗೊಂಡಿದೆ.

You may also like