Home » Vishal: ಆರೋಗ್ಯ ಸಮಸ್ಯೆ – ತುಳುನಾಡು ದೈವಗಳ ಮರೆಹೋದ ನಟ ವಿಶಾಲ್ !! ದೈವ ಹೇಳಿದ್ದೇನು?

Vishal: ಆರೋಗ್ಯ ಸಮಸ್ಯೆ – ತುಳುನಾಡು ದೈವಗಳ ಮರೆಹೋದ ನಟ ವಿಶಾಲ್ !! ದೈವ ಹೇಳಿದ್ದೇನು?

0 comments

Vishal: ತಮಿಳಿನ ಖ್ಯಾತ ನಟ ವಿಶಾಲ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಇದೀಗ ತುಳುನಾಡಿನ ದೈವಗಳ ಮೊರೆ ಹೋಗಿದ್ದಾರೆ.

ಹೌದು, ಖ್ಯಾತ ನಟ ವಿಶಾಲ್ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದು ನಿಮಗೆ ಗೊತ್ತಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅವರು ನಡುಗುತ್ತಾ ಮಾತನಾಡಿದ್ದು ಅವರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು ಎಂಬುದು ತಿಳಿಸಿತ್ತು. ಇದೀಗ ಈ ಹಿನ್ನೆಲೆ ನಟ ವಿಶಾಲ್ ಅವರು ತುಳುನಾಡಿನ ದೈವದ ಮೊರೆ ಹೋಗಿದ್ದಾರೆ.

ಯಸ್, ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಹರಿಪಾದದಲ್ಲಿನ ಜಾರಂದಾಯ ದೇವಾಲಯಕ್ಕೆ ಅವರು ಭೇಟಿ ನೀಡಿದ್ದು, ಆರೋಗ್ಯ ಸಮಸ್ಯೆಯನ್ನು ನಿವಾರಿಸುವಂತೆ ದೈವದ ಮೊರೆ ಹೋಗಿದ್ದಾರೆ. ಕಣ್ಣೀರು ಹಾಕಬೇಡ, ನಾನಿದ್ದೇನೆ ಎಂದು ಖ್ಯಾತ ನಟ ವಿಶಾಲ್ ಗೆ ತುಳುನಾಡಿನ ದೈವದ ಅಭಯ ನೀಡಿದೆ. ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ ಆರೋಗ್ಯ ಸಮಸ್ಯೆ ನಿವಾರಿಸುವಂತೆ ಬೇಡಿಕೊಂಡಿದ್ದಾರೆ. ಕಣ್ಣೀರು ಹಾಕಬೇಡ, ನಾನಿದ್ದೇನೆ. ನಿನ್ನ ಆರೋಗ್ಯ ಸರಿಯಾಗಲಿದೆ. ಗುಣಮುಖನಾಗಿ ಬಂದು ತುಲಾಭಾರ ಸೇವೆ ಅರ್ಪಿಸು ಎಂದು ದೈವ ಅಭಯ ನೀಡಿದೆ.

You may also like