Home » Rayachur: ಹಾಸ್ಟೆಲ್ ಹಿಂದೆ ರಾಶಿ ರಾಶಿ ಕಾಂಡಮ್ ಪತ್ತೆ – ತಲೆತಲೆ ಚಚ್ಚಿಕೊಂಡ ವಾರ್ಡನ್!!

Rayachur: ಹಾಸ್ಟೆಲ್ ಹಿಂದೆ ರಾಶಿ ರಾಶಿ ಕಾಂಡಮ್ ಪತ್ತೆ – ತಲೆತಲೆ ಚಚ್ಚಿಕೊಂಡ ವಾರ್ಡನ್!!

0 comments

Raichur : ಪೋಷಕರು ಮಕ್ಕಳ ಮೇಲೆ ನಂಬಿಕೆ ಇಟ್ಟು ಅವರನ್ನು ಹೊರಗಡೆ ಹಾಸ್ಟೆಲ್ ಗಳಲ್ಲಿ ಓದಲು ಬಿಡುತ್ತಾರೆ. ಅದರಲ್ಲಿ ಕೆಲವರು ಅಪ್ಪ ಮಂದಿರ ಕಷ್ಟ ಸುಖಗಳನ್ನು ನೋಡಿಕೊಂಡು ಚೆನ್ನಾಗಿ ಓದಿದರೆ, ಇನ್ನು ಕೆಲವರು ಅಡ್ಡದಾರಿ ತುಳಿಯುವುದೇ ಹೆಚ್ಚು. ಅಂತದ್ದೇ ಪ್ರಕರಣ ಇದೀಗ ರಾಯಚೂರಿನ ಹಾಸ್ಟೆಲ್ ನಲ್ಲಿ ಬೆಳಕಿಗೆ ಬಂದಿದೆ.

ಹೌದು, ರಾಯಚೂರಿನ(Rayachuru) ಈ ಸ್ಥಳ ಅಪ್ರಾಪ್ತ ಪ್ರೇಮಿಗಳ ಹಾಟ್​ಸ್ಪಾಟ್ ಆಗಿ ಮಾರ್ಪಟ್ಟಿದೆ. ಕಲಾವಿದರ ಬಾಳಿಗೆ ಬೆಳಕಾಗಬೇಕಿದ್ದ ರಂಗಮಂದಿರವೀಗ ಪ್ರೇಮ ಮಂದಿರವಾಗಿದೆ. ಅಪ್ರಾಪ್ತರ ಲವ್ ಅಡ್ಡ ಆಗಿ ಬದಲಾಗಿದೆ. ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ಇದೀಗ ಅನೈತಿಕ ತಾಣವಾಗಿ ಬದಲಾಗಿದೆ. ರಂಗಮಂದಿರದ ಪಕ್ಕದಲ್ಲೇ ಸಾರ್ವಜನಿಕ ಪಾರ್ಕ್ ಇರುವುದರಿಂದ ಯಾರ ಭಯವಿಲ್ಲದೇ ಚುಂಬಿಸುತ್ತಾ, ಅಶ್ಲೀಲವಾಗಿ ವರ್ತಿಸುವುದು ಸಾಮಾನ್ಯವಾಗುತ್ತಿದೆ.

ಇಷ್ಟೇ ಅಲ್ಲದೆ ಶಾಲಾ-ಕಾಲೇಜಿಗೆ ಬರುವ ಅಪ್ರಾಪ್ತರ ಅನೈತಿಕ ಚಟುವಟಿಕೆಗಳನ್ನು ಸಾರ್ವಜನಿಕರು ತಲೆ ತಗ್ಗಿಸಿ ಹೋಗುವಂತಾಗಿದೆ. ರಂಗಮಂದಿರದ ಆವರಣದಲ್ಲಿ ಎಲ್ಲೆಂದರಲ್ಲಿ ಕಾಂಡೋಮ್​ಗಳು ಬಿದ್ದಿವೆ. ಹಗಲಲ್ಲಿ ಪ್ರೇಮಿಗಳ ಹಾಟ್ ಸ್ಪಾಟ್ ಆಗುವ ಈ ರಂಗಮಂದಿರ ರಾತ್ರಿಯಾದ್ರೆ ಕುಡುಕರ ಅಡ್ಡೆಯಾಗುತ್ತದೆ. ರಂಗಮಂದಿರದಿಂದ ಕೆಲವೇ ದೂರದಲ್ಲಿ ಪೊಲೀಸ್ ಠಾಣೆ ಇದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹಗಲು-ರಾತ್ರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

You may also like

Leave a Comment