Home » Actor Darshan: ನಟ ದರ್ಶನ್‌ಗೆ ಕನಿಷ್ಠ ಸೌಲಭ್ಯ ಕುರಿತ ಅರ್ಜಿ ವಿಚಾರಣೆ: ಸೆ.25 ಕ್ಕೆ ಮುಂದೂಡಿದ ಕೋರ್ಟ್‌

Actor Darshan: ನಟ ದರ್ಶನ್‌ಗೆ ಕನಿಷ್ಠ ಸೌಲಭ್ಯ ಕುರಿತ ಅರ್ಜಿ ವಿಚಾರಣೆ: ಸೆ.25 ಕ್ಕೆ ಮುಂದೂಡಿದ ಕೋರ್ಟ್‌

0 comments
Actor Darshan

Actor Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್‌ಗೆ ಕೆಲ ಸೌಲಭ್ಯ ಕಲ್ಪಿಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಸೆ.25 ಕ್ಕೆ ಮುಂದೂಡಿದೆ.

ಜೈಲಲ್ಲಿ ಹಾಸಿಗೆ, ತಲೆದಿಂಬು ಒದಗಿಸುವಂತೆ ನಟ ದರ್ಶನ್‌ ಈ ಹಿಂದೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ದರ್ಶನ್‌ಗೆ ಹಾಸಿಗೆ, ತಲೆದಿಂಬು ನೀಡುವಂತೆ ಆದೇಶ ನೀಡಿತ್ತು ಆದರೆ ಜೈಲಾಧಿಕಾರಿಗಳು ಇಲ್ಲಿಯವರೆಗೂ ದರ್ಶನ್‌ಗೆ ಹಾಸಿಗೆ, ತಲೆದಿಂಬು ನೀಡಿಲ್ಲ.

ಇದನ್ನೂ ಓದಿ:Yamaha: ದಸರಾ ಹಬ್ಬಕ್ಕಾಗಿ ಸ್ಕೂಟರ್, ಬೈಕ್ ಮೇಲೆ ಭರ್ಜರಿ ಆಫರ್ ಘೋಷಿಸಿದ ಯಮಹಾ!! ಕೊಳ್ಳಲು ಮುಗಿಬಿದ್ದ ರಾಜ್ಯದ ಜನ

ಹೀಗಾಗಿ ಮತ್ತೆ ನಟ ದರ್ಶನ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಬೆಂಗಳೂರಿನ 57ನೇ ಸಿಸಿಹೆಚ್‌ ಕೋರ್ಟ್‌, ವಾದ ಪ್ರತಿವಾದ ಆಲಿಸಿದ್ದು, ಅರ್ಜಿ ಕುರಿತ ಆದೇಶವನ್ನು ಸೆ.19 ಕ್ಕೆ ನಿಗದಿ ಮಾಡಿತ್ತು. ಇಂದು ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್‌ ಸೆ.25 ಕ್ಕೆ ವಿಚಾರಣೆ ಮುಂದೂಡಿದೆ.

You may also like