Home » Heart Attack: ಕೆಲಸ ಮಾಡುತ್ತಿರುವಾಗಲೇ ಪ್ರಾಣ ಬಿಟ್ಟ ಬ್ಯಾಂಕ್‌ ನೌಕರ; ವೀಡಿಯೋ ವೈರಲ್‌

Heart Attack: ಕೆಲಸ ಮಾಡುತ್ತಿರುವಾಗಲೇ ಪ್ರಾಣ ಬಿಟ್ಟ ಬ್ಯಾಂಕ್‌ ನೌಕರ; ವೀಡಿಯೋ ವೈರಲ್‌

0 comments
Heart Attack

Heart Attack: ಸಾವು ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹುಟ್ಟಿದ ಮನುಷ್ಯನಿಗೆ ಸಾವು ಖಂಡಿತ. ಆದರೆ ಹೇಳದೇ ಕೇಳದೇ ಬರುವ ಸಾವು ಇತ್ತೀಚೆಗೆ ಹೆಚ್ಚುತ್ತಿದೆ. ಇಂದು ನಮ್ಮೊಂದಿಗೆ ಚೆನ್ನಾಗಿದ್ದ ವ್ಯಕ್ತಿ ಕ್ಷಣ ಮಾತ್ರದಲ್ಲಿ ನಮ್ಮೊಂದಿಗೆ ಇರುವುದಿಲ್ಲ ಎನ್ನುವ ಸತ್ಯವನ್ನು ಇತ್ತೀಚಿನ ದಿನಗಳಲ್ಲಿ ಮನುಷ್ಯ ಅರಿತಿದ್ದಾನೆ. ಅಂತಹುದೇ ಒಂದು ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

One sided love: ಒನ್‌ ಸೈಡ್‌ ಲವ್‌ನಿಂದ ರೋಸಿ ಹೋಗಿದ್ದೀರಾ? ಹಾಗಿದ್ರೆ ಹೀಗೆ ಮಾಡಿ, ಬೇಗ ರಿಲೀಫ್‌ ಪಡೀರಿ !!

ಜೂನ್‌ 19 ರಂದು ಈ ಅವಘಡ ಸಂಭವಿಸಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಬ್ಬಂದಿಯೊಬ್ಬ ತಾನು ಕೆಲಸ ಮಾಡುತ್ತಿದ್ದಾಗಲೇ ಹೃದಯ ಸ್ತಂಭನಕ್ಕೊಳಗಾಗಿ ಪ್ರಾಣ ಬಿಟ್ಟ ಘಟನೆಯ ವಿಡಿಯೋವೊಂದು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಆಫೀಸಿನಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಇದ್ದಕ್ಕಿದ್ದಂತೆ ಚೇರ್‌ಗೆ ಒರಗಿ ಮುಖವನ್ನೊಮ್ಮೆ ಒರೆಸಿ ಏಕಾಏಕಿ ಮುಖವನ್ನು ಮೇಲೆ ಮಾಡಿ ಎರಡು ಕಣ್ಣನ್ನು ಬಿಟ್ಟಿದ್ದು, ಕ್ಷಣಮಾತ್ರದಲ್ಲೇ ಆತನ ಪ್ರಾಣಪಕ್ಕಿ ಹಾರಿ ಹೋಗುತ್ತದೆ. ಪಕ್ಕದಲ್ಲೇ ಇದ್ದ ಸಿಬ್ಬಂದಿಗೆ ಇದರ ಪರಿವೆಯೇ ಇರುವುದಿಲ್ಲ. ಕೊನೆಗೆ ಸಿಬ್ಬಂದಿಗಳು ಓಡೋಡಿ ಬಂದಿದ್ದಾರೆ.

ಮೃತಪಟ್ಟ ವ್ಯಕ್ತಿಯು ಉತ್ತರಪ್ರದೇಶದ ಮಹೋಬಾದ ಬ್ಯಾಂಕ್‌ ನೌಕರ ರಾಜೇಶ್‌ ಕುಮಾರ್‌ ಶಿಂಧೆ ಎಂದು ಗುರುತಿಸಲಾಗಿದೆ. ಇವರಿಗೆ 30 ವರ್ಷದವರಾಗಿದ್ದು, ಎಚ್‌ಡಿಎಫ್‌ಸಿ ಶಾಖೆಯಲ್ಲಿ ಕೃಷಿ ಪ್ರಧಾನ ವ್ಯವಸ್ಥಾಪಕರಾಗಿದ್ದರು.

Satish Jarakiholi: 2028ಕ್ಕೆ ನಾನೇ ರಾಜ್ಯದ ಮುಖ್ಯಮಂತ್ರಿ- ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕ ಹೇಳಿಕೆ !!

You may also like

Leave a Comment