2
Heart Attack: ಧಾರವಾಡ ಹೃದಯಾಘಾತದಿಂದ ಯುವತಿಯೊಬ್ಬಳು ಅಸು ನೀಗಿದ ಘಟನೆ ಇಲ್ಲಿನ ಕಲಘಟಗಿ ರಸ್ತೆಯಲ್ಲಿನ ಪುರೋಹಿತ ನಗರದಲ್ಲಿ ಮಂಗಳವಾರ ನಡೆದಿದೆ. ಕೃಷಿ ಪದವೀಧರೆ ಜೀವಿತಾ ಪ್ರಭಾಕರ ಕುಸಗೂರ ಎಂಬ 26 ವರ್ಷದ ಯುವತಿ ಹೃದಯಾಘಾತಕ್ಕೆ ಬಲಿಯಾದ ಯುವತಿ.
ಮಂಗಳವಾರ ಮಧ್ಯಾಹ್ನ ಮನೆಯಲ್ಲಿದ್ದ ಜೀವಿತಾಗೆ ಎದೆ ನೋವು ಕಾಣಿಸಿಕೊಂಡಿತು. ತೀವ್ರ ಎದೆನೋವಿನಿಂದ ಬಳಲಿದ ಆಕೆಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರೊಳಗೆ ಜೀವಿತಾಳು ಇಹಲೋಕ ತ್ಯಜಿಸಿದ್ದಳು.
ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಜೀವಿತಾ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ಸಿದ್ಧತೆ ಕೈಕೊಂಡಿದ್ದಳು. ಜೀವಿತಾಳ ಸಾವಿನಿಂದ ಕುಟುಂಬದವರು ಕಣ್ಣೀರಿಡುವಂತಾಗಿದೆ.
